ಮಹಾನಗರ ಪಾಲಿಕೆ ಚುನಾವಣೆ, ಕೈ ಹುರಿಯಾಳು ಪಟ್ಟಿ ಇಲ್ಲಿದೆ ನೋಡಿ….
ಸರಕಾರ್ ನ್ಯೂಸ್ ವಿಜಯಪುರ
ತೀವ್ರ ಕುತೂಹಲ ಕೆರಳಿರಿಸುವ ಮಹಾನಗರ ಪಾಲಿಕೆ ಚುನಾವಣೆಯ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗೆ ಹಂತ ಹಂತವಾಗಿ ತೆರೆ ಬೀಳುತ್ತಿದ್ದೂ, ಕೈಪಾಳಯದಿಂದ ಸೋಮವಾರ ಅಂತಿಮ ಪಟ್ಟಿ ಪ್ರಕಟಗೊಂಡಿದೆ.
ಕಳೆದೊಂದು ವಾರದಿಂದ ನಡೆಯುತ್ತಿದ್ದ ಅಭ್ಯರ್ಥಿ ಆಯ್ಕೆ ಕಸರತ್ತಿಗೆ ನಾಮಪತ್ರ ಸಲ್ಲಿಸುವ ಅಂತಿಮ ದಿನದಿಂದು ಇತೀಶ್ರೀ ಹಾಡಲಾಗಿದೆ. ಒಟ್ಟು 35 ವಾರ್ಡ್‌ಗಳಿಗೆ ಘಟಾನುಘಟಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿರುವ ಕಾಂಗ್ರೆಸ್ ಇದರಲ್ಲಿ ಮಾಜಿ ಸದಸ್ಯರಿಗೂ ಮತ್ತೊಂದು ಅವಧಿಗೆ ಮಣೆ ಹಾಕಿದೆ.
ಇನ್ನು ಕೆಲವು ಪ್ರಾಮಾಣಿಕ ಕಾರ್ಯಕರ್ತರಿಗೆ ಅವಕಾಶ ಸಿಗದೇ ಇರುವುದು ಸಹಜವಾಗಿಯೇ ಅಸಮಾಧಾನಕ್ಕೆ ಕಾರಣವಾಗಿದ್ದು, ಅವರ ಮನವೊಲಿಸುವ ಪ್ರಕ್ರಿಯೆ ಮುಂದುವರಿದಿದೆ. ಟಿಕೆಟ್ ವಂಚಿತರು ಬೇರೆ ಪಕ್ಷಗಳಿಗೆ ಹೋಗದಂತೆ ಹಾಗೂ ಸ್ವತಂತ್ರವಾಗಿ ಕಣಕ್ಕಿಳಿಯದಂತೆ ಮನವೊಲಿಸಲಾಗುತ್ತಿದೆ.