ಹನುಮಮಾಲೆ ಧರಿಸಿದ ಮುಸ್ಲಿಂ ವ್ಯಕ್ತಿ, ಅಣ್ಣನ ನೆಲದಲ್ಲಿ ಭಾವ್ಯಕ್ಯತೆ ಮೆರೆದ ಜಾಫರ್…!
ಸರಕಾರ್ ನ್ಯೂಸ್ ಬ.ಬಾಗೇವಾಡಿ
ಶರಣರು, ಸಂತರು ಹಾಗೂ ಸೂಫಿಗಳು ನೆಲೆಸಿ ಪುಣ್ಯ ನೆಲ ವಿಜಯಪುರ.
ಅದರಲ್ಲೂ ಮಹತ್ಮ ಬಸವೇಶ್ವರರು ಜನಿಸಿದ ಪಾವನ ನೆಲ. ಇಂತ ನೆಲದಲ್ಲಿ ಹಿಂದು-ಮುಸ್ಲಿಂ ಭೇದ ಭಾವ ಇಲ್ಲದಂತೆ ಸರ್ವರೂ ಸಹೋದರತ್ವ ಭಾವದಿಂದ ಬದುಕುತ್ತಿದ್ದಾರೆ ಎಂಬುದಕ್ಕೆ ಇಲ್ಲಿನ ಮುಸ್ಲಿಂ ವ್ಯಕ್ತಿಯೋರ್ವ ಹನುಮಮಾಲೆ ಧರಿಸಿರುವುದೇ ಸಾಕ್ಷಿ.
ಮೂಲತಃ ಬಸವನ ಬಸವನಬಾಗೇವಾಡಿ ತಾಲ್ಲೂಕಿನ ನರಸಲಗಿ ಗ್ರಾಮದ ಜಾಫರ್ ಬೆಣ್ಣೆ ಎನ್ನುವರು ಹನುಮಾನ ಮಾಲೆಯನ್ನು ಧರಿಸಿ ಭಾವೈಕ್ತೆ ಮೆರೆದಿದ್ದಾರೆ. ಒಂದು ಕಡೆ ಹಿಜಾಬ್ ಗಲಾಟೆ ನಡೆದಿದ್ದರೆ ಇತ್ತ ಈ ಜಾಫರ ಕೇಸರಿ ಬಟ್ಟೆ ಧರಿಸಿ, ಕೊರಳಲ್ಲಿ ಮಾಲೆ ಧರಿಸಿ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ.
ಕೇಸರಿ ಬಟ್ಟೆ, ಕೊರಳಲ್ಲಿ ಮಾಲೆಯನ್ನು ಧರಿಸಿ ಹಿಂದು ಮುಸ್ಲಿಂ ಭಾವೈಕ್ಯತೆ ಮೆರೆದಿದ್ದಾರೆ. ಮಾಲೆ ಧರಿಸಿ ಉತ್ತರ ಕರ್ನಾಟಕದ ಪ್ರಸಿದ್ದ ದೇವಸ್ಥಾನವಾದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿ ವ್ರತವನ್ನು ಪೂರ್ಣಗೊಳಿಸುವುದಾಗಿ ಜಾಫರ ಹೇಳಿಕೊಂಡಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್‌ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)