ಲಿಂ. ಸಿದ್ದೇಶ್ವರ ಶ್ರೀಗಳಿಗೆ ಯೋಗನಮನ, ಬಾಬಾ ರಾಮದೇವ ಸಂಕಲ್ಪ ಏನು?
ಸರಕಾರ ನ್ಯೂಸ್ ವಿಜಯಪುರ
ಪರಮ ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಈ ಶತಮಾನದ ಶ್ರೇಷ್ಠ ಸಂತ. ನುಡಿದಂತೆ ನಡೆದ ಮಹಾತ್ಮರು. ಅಂಥ ಮಹಾತ್ಮರಿಗೆ ಯೋಗ ನಮನ ಸಲ್ಲಿಸಲು ಯೋಗ ಗುರು ಬಾಬಾ ರಾಮದೇವ ನೇತೃತ್ವದ ಪತಂಜಲಿ ಸಮಿತಿಯಿಂದ ಸಂಕಲ್ಪ ಮಾಡಿರುವುದಾಗಿ ಪತಂಜಲಿಯ ರಾಜ್ಯ ಪ್ರಭಾರಿ ಯೋಗ ಗುರು ಭವರಲಾಲ್ ಆರ್ಯ ತಿಳಿಸಿದರು.
ಜ. 1 ಮತ್ತು 2 ರಂದು ನಡೆಯಲಿರುವ ಸಿದ್ದೇಶ್ವರ ಸ್ವಾಮಿಜಿ ಗುರುನಮನ ಕಾರ್ಯಕ್ರಮ ಹಿನ್ನೆಲೆ ಯೋಗ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ನಗರದ ಪ್ರತಿ ವಾರ್ಡ್ ಗಳಲ್ಲಿ, ಗ್ರಾಮೀಣ ಭಾಗಗಳಲ್ಲಿ ಪ್ರತಿ ದಿನ ಯೋಗ ಶಿಬಿರ ನಡೆಸಲಾಗುತ್ತಿದೆ. ಸುಮಾರು 10 ಸಾವಿರ ಜನ ನಮ್ಮ ಸಂಸ್ಥೆಯಿಂದ ಯೋಗ ತರಬೇತಿ ಪಡೆದಿದ್ದು ಆ ಶಿಕ್ಷಕರೆಲ್ಲರೂ ತಮ್ಮ ತಮ್ಮ ಭಾಗಗಳಲ್ಲಿ ಪ್ರತಿ ದಿನ ಶಿಬಿರ ನಡೆಸಲಿದ್ದಾರೆ. ಜ. 2 ರಂದು ಜ್ಞಾನ ಯೋಗಾಶ್ರಮದಲ್ಲಿ ಯೋಗಗುರು ಬಾಬಾರಾಮದೇವ ನೇತೃತ್ವ ಬೃಹತ್ ಪ್ರಮಾಣದಲ್ಲಿ ಯೋಗನಮನ ಸಲ್ಲಿಸಲಾಗುವುದೆಂದರು.
ಬಾಬಾ ರಾಮದೇವ ಹಾಗೂ ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಸಂಬಂಧ ಅಗಾಧವಾದದ್ದು. ರಾಮದೇವ ಅವರು ಸಿದ್ದೇಶ್ವರ ಸ್ವಾಮೀಜಿ ಅವರನ್ನು ಅಪಾರವಾಗಿ ಗೌರವಿಸುತ್ತಿದ್ದರು. ಸಿದ್ದೇಶ್ವರ ಸ್ವಾಮೀಜಿ ಕೂಡ ರಾಮದೇವ ಬಾಬಾ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಪೂಜ್ಯ ರ ಜೊತೆಗಿನ ಒಡನಾಡದ ಕುರಿತು ಬಾಬಾ ರಾಮದೇವ ಅವರು ಮಾತನಾಡಲಿದ್ದಾರೆ ಎಂದು ತಿಳಿಸಿದರು.
ಪೂಜ್ಯ ಅಮೃತಾನಂದ ಸ್ವಾಮೀಜಿ, ಶಿವಶಂಕರ ಶಿವಾಚಾರ್ಯರು, ಹರ್ಷಾನಂದ ಸ್ವಾಮೀಜಿ, ರುದ್ರಮುನಿ ಶಿವಾಚಾರ್ಯರು ಮತ್ತಿತರರಿದ್ದರು.