10 ಲಕ್ಷಕ್ಕೆ 45 ಲಕ್ಷ ಕೊಡುವ ಆಮಿಷ, ನಂಬಿ ಕೆಟ್ಟ ಸಾಫ್ಟವೇರ್ ಇಂಜಿನಿಯರ್, ಅಬ್ಬಬ್ಬಾ…..ಕಳೆದುಕೊಂಡ ಹಣ ಎಷ್ಟು ಗೊತ್ತಾ?
ಸರಕಾರ ನ್ಯೂಸ್ ವಿಜಯಪುರ
ಹತ್ತು ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ 45 ಲಕ್ಷ ರೂಪಾಯಿ ಕೊಡುವ ಆಮಿಷಕ್ಕೆ ಬಲಿಯಾಗಿ ಸಾಫ್ಟ್‌ವೇರ್ ಇಂಜಿನೀಯರ್ ಒಬ್ಬ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾನೆ.
ಹೌದು, ವಿಜಯಪುರ ದ ಕನಕದಾಸ ಬಡಾವಣೆಯ ನಿವಾಸಿ ದೀಪಕ ರಮೇಶ ಅರಕೇರಿ (28) ಭಾರಿ ಮೋಸ- ವಂಚನೆಗೆ ಒಳಗಾಗಿದ್ದಾರೆ.
ರುಬಿ ಟ್ರೇಡಿಂಗ್ ಗ್ರುಪ್ ಎಂಬ ವಾಟ್ಸಪ್ ಗ್ರುಪ್ ನಲ್ಲಿ ಬಂದ ಸಂದೇಶ ನಂಬಿದ ರಮೇಶ ಅದರಲ್ಲಿ ಬಂದ ಸಂದೇಶ ನಂಬಿ 13 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಾರೆ. ಆದರೆ, ಹೂಡಿಕೆ ಮಾಡಿದ ಹಣಕ್ಕೆ ಲಾಭಾಂಶ ಕೇಳಲಾಗಿ ಇನ್ನೂ 13 ಲಕ್ಷ ರೂಪಾಯಿ ಕೇಳಿದ್ದರಿಂದ ಸಂಶಯ ಬಂದು ದೀಪಕ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕು ಗೊಳಿಸಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)