ಸಂಶೋಧನಾ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ? ಮಹಿಳಾ ವಿವಿ ಕುಲಪತಿ ಹೇಳಿದ್ದೇನು?
ಸರಕಾರ ನ್ಯೂಸ್ ವಿಜಯಪುರ
ರಾಜ್ಯ ದ ಏಕೈಕ ಮತ್ತು ಪ್ರತಿಷ್ಠಿತ ಮಹಿಳಾ ವಿವಿ ಎಂಬ
ಖ್ಯಾತಿ ಪಡೆದಿರುವ ಅಕ್ಕಮಹಾದೇವಿ ವಿಶ್ವ ವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯದ ನಡೆದಿರುವ ಆರೋಪ ಕೇಳಿ ಬಂದಿದೆ !
ಮಹಿಳಾ ವಿವಿಯ ಮ್ಯಾನೇಜ್ಮೆಂಟ್ ವಿಭಾಗದ ಪ್ರೊ. ಮಲ್ಲಿಕಾರ್ಜುನ ಎನ್ ಎಲ್ ಅವರಿಂದ ಪಿಎಚ್ ಡಿ ಅಧ್ಯಯನ ಮಾಡುತ್ತಿರೋ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರೋ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ವಿದ್ಯಾರ್ಥಿನಿ ರಜಿಸ್ಟಾರ್ ಗೆ ದೂರು ನೀಡಿದ್ದು, ಅದರನ್ವಯ ತನಿಖೆ ನಡೆಸಲಾಗುತ್ತಿದೆ.
ಕಳೆದ ಫೆ.27 ರಂದೇ ದೂರು ನೀಡಲಾಗಿದ್ದು ದೂರು ದಾಖಲಿಸಿಕೊಂಡಿರುವ
ಆಂತರಿಕ ದೂರು ಸಮಿತಿ ತನಿಖೆ ಮುಂದುವರಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕುಲಪತಿ ತುಳಸಿಮಾಲ ಅವರು, ಯುಜಿಸಿ ನಿಯಮಾವಳಿ ಪ್ರಕಾರ ರಚನೆಯಾದ ಆಂತರಿಕ ದೂರು ಸಮಿತಿಗೆ ಸಂಶೋಧನಾ ವಿದ್ಯಾರ್ಥಿನಿ ದೂರು ನೀಡಿದ್ದಾರೆ. ದೂರಿನ ಪ್ರತಿ ಸಂಬಂಧಿಸಿದ ಪ್ರೊಪೆಸರ್ ಗೆ ಕಳುಹಿಸಿಕೊಡಲಾಗಿದೆ. ಆದರೆ, ಲೈಂಗಿಕ ದೌರ್ಜನ್ಯ ಎಂದು ವಿದ್ಯಾರ್ಥಿನಿ ಹೇಳಿಲ್ಲ. ಮಾನಸಿಕ ಹಿಂಸೆ ಎಂದಷ್ಟೆ ತಿಳಿಸಿದ್ದಾರೆ. ಪದೇ ಪದೇ ಬೈಯ್ಯುವುದು, ಅವಮಾನಿಸುವುದು ಮಾಡಿದ್ದಾರೆಂದು ತಿಳಿಸಿದ್ದಾಳೆ. ಹೀಗಾಗಿ ತನಿಖೆ ಬಳಿಕವೇ ಸತ್ಯಾಂಶ ತಿಳಿಯಲಿದೆ ಎಂದಿದ್ದಾರೆ.