ಭೀಕರ ಅಪಘಾತ | ಹರಿಜನ ಸೇರಿ ನಾಲ್ವರ ಬಂಧನ
ವಿಜಯಪುರ: ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆಯಲ್ಲಿ ಐದು ಜನ ಆರೋಪಿಗಳ ಬಂಧನ ಮಾಡಲಾಗಿದೆ ಎಂದು ಎಸ್ಪಿ ಋಷಿಕೇಸ್ ಸೋನವಾಣೆ ಮಾಹಿತಿ ನೀಡಿದರು. ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ವಕೀಲ ರವಿ ಮೇಲಿನಕೇರಿನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಇನ್ನು ರವಿಯ ಬೈಕ್ಗೆ ಕಾರು ಡಿಕ್ಕಿ ಹೊಡಿಸಿ ಬರೋಬ್ಬರಿಗೆ ಎರಡು ಕಿಲೊಮೀಟರ್ ಎಳೆದುಕೊಂಡು ಆರೋಪಿಗಳು ಹೋಗಿದ್ದರು. ಪ್ರಕರಣದಲ್ಲಿ ಪ್ರಮುಖ ಆರೋಪಿ ತುಳಸಿರಾಮ ಹರಿಜನ, ಅಲೆಕ್ಸ್ ಗೊಲ್ಲರ, ಷಣ್ಮುಖ ನಡುವಿನಕೇರಿ, ಪ್ರಕಾಶ ಗೊಲ್ಲರ, ಮುರಿಘೇಶ ಉಳ್ಳಾಗಡ್ಡಿ ಬಂಧಿತ ಆರೋಪಿಗಳು. ಪ್ರಮುಖ ಆರೋಪಿ ಹರಿಜನ ಹಾಗೂ ಹತ್ಯೆಯಾಗಿರುವ ವಕೀಲ ರವಿ ಮಧ್ಯೆ ಜಗಳವಾಗಿತ್ತು. ಅದಕ್ಕಾಗಿ ಅಪಘಾತದಲ್ಲಿ ರವಿನ್ನು ಭೀಕರವಾಗಿ ಹತ್ಯೆ ಮಾಡಿದ್ದರು. ಈ ಕುರಿತು ವಿಜಯಪುರ ಸಂಚಾರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.