ನಮ್ಮ ವಿಜಯಪುರ

ತೊರವಿ ವಸತಿ ಶಾಲೆಯಲ್ಲಿ ಕಳ್ಳತನ, ಏನೆಲ್ಲಾ ಕದ್ದೊಯ್ದಿದ್ದಾರೆ ಗೊತ್ತಾ?

ಸರಕಾರ್‌ ನ್ಯೂಸ್‌ ವಿಜಯಪುರ

ತಿಕೋಟಾ ತಾಲೂಕಿನ ತೊರವಿ ಲಕ್ಷ್ಮಿ ತೋಟದ ಸರ್ಕಾರಿ ಕಿರಿಯ ಪ್ರಾಥಮಿಕ ವಸತಿ ಶಾಲೆಯ ಬಿಸಿಯೂಟ ಕೋಣೆಯ ಕೀಲಿ ಮುರಿದು ಅಡುಗೆ ಸಾಮಗ್ರಿ ಕಳವು ಮಾಡಲಾಗಿದೆ.

ಅಡುಗೆ ಕೋಣೆಯಲ್ಲಿದ್ದ ಸಿಲಿಂಡರ್‌, ಕಬ್ಬಿಣದ ಎರಡು ಒಲೆ, 40 ಪ್ಲೇಟ್‌ಗಳು, 30 ಸ್ಟೀಲ್‌ ಗ್ಲಾಸ್‌, 10 ಲೀಟರ್‌ ನೀರಿನ ಸಾಮರ್ಥ್ಯದ ಕುಕ್ಕರ್‌, 6 ಪ್ಲಾಸ್ಟಿಕ್‌ ಕುರ್ಚಿ, 200 ಫೂಟ್‌ ಕೇಬಲ ವೈಯರ್‌, ಸ್ಟಾರ್ಟರ್‌ ಡಬ್ಬಿ ಸೇರಿದಂತೆ ಒಟ್ಟು 19,400 ರೂ.ಮೌಲ್ಯದ ಸಾಮಗ್ರಿ ಕಳವು ಮಾಡಲಾಗಿದೆ.

ನ. 19ರಂದು ಶನಿವಾರ ಅರ್ಧದಿನದ ಶಾಲೆ ಇದ್ದು ಆ ಪ್ರಕಾರ ಬೆಳಗ್ಗೆ 11.30ಕ್ಕೆ ಮುಖ್ಯ ಶಿಕ್ಷಕಿ ಕರ್ತವ್ಯ ಮುಗಿಸಿ ಬಿಸಿಯೂಟ ಕೊಠಡಿಯ ಕೀಲಿ ಹಾಕಿಕೊಂಡು ನಿರ್ಗಮಿಸಿದ್ದಾರೆ. ನ. 21ರಂದು ಶಾಲೆಗೆ ಬಂದು ನೋಡಲಾಗಿ ಬಿಸಿಯೂಟ ಕೋಣೆ ಕೀಲಿ ಮುರಿದಿತ್ತು. ಒಳಗೆ ನೋಡಲಾಗಿ ಕಳುವಾಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಶಾಲೆ ಮುಖ್ಯ ಶಿಕ್ಷಕಿ ಲಕ್ಷ್ಮಿಬಾಯಿ ಯಲ್ಲಪ್ಪ ಮಲಕನವರ ವಿಜಯಪುರ ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್‌ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!