ಬಿಸಿಲೂರಿನಲ್ಲಿ ಹೆಚ್ಚಿದ ತಾಪಮಾನ, ಆಕಸ್ಮಿಕ ಬೆಂಕಿ, ಲಾರಿ ಸಂಪೂರ್ಣ ಭಸ್ಮ !
ಇಂಡಿ: ಬಿಸಿಲೂರು ಖ್ಯಾತಿಯ ವಿಜಯಪುರ ಜಿಲ್ಲೆಯಲ್ಲಿ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದ್ದು, ಆಕಸ್ಮಿಕ ಅಗ್ನಿ ಅವಘಡಗಳು ಸಂಭವಿಸುತ್ತಿವೆ.
ಗುರುವಾರ ಕೂಡಗಿ ಎನ್ ಟಿಪಿಸಿಯಲ್ಲಿ ಬೆಂಕಿ ಅನಾಹುತ ಕಾಣಿಸಿಕೊಂಡಿತ್ತು.
ಇದೀಗ ಅಂದರೆ ಶುಕ್ರವಾರ ಝಳಕಿ ಹಾಗೂ ಗುಂದವಾನ ಮಧ್ಯೆ ರಾಷ್ಟ್ರೀಯ ಹೆದ್ದಾರಿಯ ವೈಷ್ಣವಿ ಪೆಟ್ರೋಲಿಯಂ ಪಂಪ್ ಎದುರಿಗೆ ಲಾರಿಯೊಂದಕ್ಕೆ ಆಕಸ್ಮಿಕ ಬೆಂಕಿ ಹತ್ತಿ ಲಾರಿ ಸಂಪೂರ್ಣ ಸುಟ್ಟು ಕರಕಲಾಗಿದೆ.
ಬೆಂಕಿಯ ಕೆನ್ನಾಲಿಗೆ ಚಾಚಿದಂತೆಲ್ಲ ದಟ್ಟ ಹೊಗೆ ಆಗಸದೆತ್ತರಕ್ಕೆ ಚಿಮ್ಮಿತು. ಸುತ್ತಲಿನ ನಿವಾಸಿಗಳು ಗಾಬರಿಗೊಂಡರು. ಕೆಲಕಾಲ ವಾಹನ ಸಂಚಾರಕ್ಕೆ ವ್ಯತ್ಯಯವಾಯಿತು.