ದರ್ಗಾ ಜೈಲ್ ಬಳಿ ಸಂಶಾಯಸ್ಪದವಾಗಿ ತಿರುಗಾಟ, ಆ ಇಬ್ಬರ ಕಿಸೆಯಲ್ಲಿ ಏನಿತ್ತು ಗೊತ್ತಾ?
ವಿಜಯಪುರ: ಇಲ್ಲಿನ ಐತಿಹಾಸಿಕ ದರ್ಗಾ ಜೈಲ್ ಬಳಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು ಅವರ ಬಳಿ ಇದ್ದ ವಸ್ತು ಕಂಡು ಗಾಬರಿಯಾಗಿದ್ದಾರೆ.
ಮೇ 2 ರಂದು ಸಂಜೆ 5.54ರ ಸುಮಾರಿಗೆ ಕಾರಾಗೃಹದ ಮುಖ್ಯ ದ್ವಾರದ ಬಳಿ ರಾಹುಲ ರಮೇಶ ಗೊಲ್ಲರ (20) ಹಾಗೂ ರಾಘು ಸಂಜು ಸಾಟೆ (21) ಅನುಮಾನಸ್ಪದವಾಗಿ ಸಂಚರಿಸುತ್ತಿದ್ದರು. ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳ ಭೇಟಿಗೆ ರಜೆ ಇರುವುದಾಗಿ ತಿಳಿಸಿದರೂ ಅತ್ತಿಂದಿತ್ತ ತಿರುಗಾಡುತ್ತಿದ್ದರು. ವಿಚಾರಣಾಧೀನ ಕೈದಿಗೆ ಭೇಟಿ ನೀಡಲು ಅವಕಾಶ ಇಲ್ಲವೆಂದರೂ ಪದೇ ಪದೇ ಭೇಟಿ ಮಾಡುವ ಪ್ರಯತ್ನದಲ್ಲಿದ್ದರು.
ಈ ವೇಳೆ ಅವರ ಮೇಲೆ ಸಂಶಯ ಬಂದು 2ನೇ ಪಾಳಿಯ ಸಿಬ್ಬಂದಿ ಬಾಳಪ್ಪ ದೇವಮಾನೆ ಹಾಗೂ ಶೀತಲ ತೇರದಾಳ ಮತ್ತು ರಾಮನಗೌಡ.ಜಿ ತಪಾಸಣೆ ಮಾಡಿದ್ದಾರೆ. ಆಗ ಬಟ್ಟೆಗಳಲ್ಲಿ ಜಿನ್ಸ್ ಪ್ಯಾಂಟ್ ಗಾಂಜಾ ದೊರಕ್ಕಿದೆ. 2ನೇ ಪಾಳಿಯ ಕರ್ತವ್ಯದ ಅಧಿಕಾರಿ ಮಂಜುನಾಥ ಬಡಿಗೇರ ಗಾಂಜಾ ವಶಪಡಿಸಿ ಕೊಂಡಿರುತ್ತಾರೆ. ಈ ಬಗ್ಗೆ ಆದರ್ಶನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.