ಮುದ್ದೇಬಿಹಾಳದಲ್ಲಿ ಬೆಂಕಿ ಅವಘಡ, ಮೂರು ಶೆಡ್ ಗಳು ಭಸ್ಮ, ಹಾನಿಯ ಅಂದಾಜು ಮೌಲ್ಯ ಎಷ್ಟು ಗೊತ್ತಾ?
ವಿಜಯಪುರ: ಆಕಸ್ಮಿಕ ಅಗ್ನಿ ಅವಘಡದಿಂದಾಗಿ ಮೂರು ಶೆಡ್ ಗಳು ಬೆಂಕಿಗಾಹುತಿಯಾಗಿವೆ.
ಮುದ್ದೇಬಿಹಾಳ ತಾಲೂಕಿನ ನಾಲತವಾಡ ಸಮೀಪ ಈ ಘಟನೆ ನಡೆದಿದೆ.
ಆಂಧ್ರಪ್ರದೇಶದ ರೈತರ ಲಕ್ಷ್ಮಿ ಕ್ಯಾಂಪ್ ನಲ್ಲಿ ಈ ಅವಘಢ ಸಂಭವಿಸಿದೆ.
ಬೆಂಕಿ ಅವಘಡದಲ್ಲಿ ಮೂರು ಶೆಡ್‌ಗಳು ಭಸ್ಮವಾಗಿವೆ.
ಒಂದು ಟ್ರ್ಯಾಕ್ಟರ್, ಮೂರು ಬೈಕ್, ಅಪಾರ ಪ್ರಮಾಣದ ಗೊಬ್ಬರ, ಅಕ್ಕಿ ಪಾಕೆಟ್ ಸೇರಿದಂತೆ ದೈನಂದಿನ ವಸ್ತುಗಳು ಬೆಂಕಿಗಾಹುತಿಯಾಗಿವೆ.
ಅಂದಾಜು 30ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಹಾನಿಯಾಗಿದೆ ಎಂದು ತಿಳಿದು ಬಂದಿದೆ.