ಬಸ್ ನಲ್ಲಿ ಲವ್ ಆಯ್ತು, ರೂಮಿನಲ್ಲಿ ನಡಿಬಾರದ್ದು ನಡೀತು, ಮದುವೆ ಆಗುತ್ತೇನೆಂದವ ಈಗ ಕೈಕೊಟ್ಟ, ಠಾಣೆ ಮೆಟ್ಟಿಲೇರಿದ ಯುವತಿಯ ಇಂಟ್ರೆಸ್ಟಿಂಗ್ ಲವ್ ಸ್ಟೋರಿ..!
ಸರಕಾರ ನ್ಯೂಸ್ ಮುದ್ದೇಬಿಹಾಳ
ಅದು 2017-18ನೇ ಇಸ್ವಿ. ಮುದ್ದೇಬಿಹಾಳಕ್ಕೆ ಕಾಲೇಜಿಗೆ ಬಸ್ಸಿನಲ್ಲಿ ಸಂಚರಿಸುತ್ತಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯನ್ನು ಪ್ರೀತಿಸಿದ ಪದವಿ ಕಾಲೇಜಿನ ಹುಡುಗ ಮದುವೆಯಾಗುವದಾಗಿ ನಂಬಿಸಿ ಮಾಡಬಾರದ್ದನ್ನೆಲ್ಲಾ ಮಾಡಿ ಇದೀಗ ಕೈ ಕೊಟ್ಟಿದ್ದಾನೆ !
ಅಂದ ಹಾಗೆ ಆ ಹುಡುಗನ ಹೆಸರ ಲಕ್ಷ್ಮಣ ಬೈಲಪ್ಪ ಸೋಬಾನದ. ಮುದ್ದೇಬಿಹಾಳ ತಾಲೂಕಿನ ಬೈಲಕೂರ ಗ್ರಾಮದ ಈತ ಹಡಗಲಿ ಗ್ರಾಮದ ಯುವತಿ ಮಾಂತವ್ವ ಗುರುಸಿದ್ದಪ್ಪ ಚಲವಾದಿ ಎಂಬುವಳನ್ನು ಪ್ರೀತಿಸಿದ್ದನು.
ಪ್ರತಿ ದಿನ ಒಂದೇ ಬಸ್‌ನಲ್ಲಿ ಮುದ್ದೇಬಿಹಾಳಕ್ಕೆ ಕಾಲೇಜಿಗೆ ತೆರಳುತ್ತಿದ್ದ ಈ ಇಬ್ಬರ ಮಧ್ಯೆ ಪರಿಚಯದಿಂದ ಪ್ರೇಮ ಅಂಕುರಿಸಿ ಮದುವೆಯ ಭರವಸೆ ತನಕ ಬಂದಿದೆ. ಮಾತ್ರವಲ್ಲ ಮದುವೆಗೆ ಮುಂಚಿತವಾಗಿಯೇ ನಡೆಯಬಾರದ್ದೆಲ್ಲ ನಡೆದಿದೆ.
2018ರ ಡಿಸೆಂಬರ್ 2ರಂದು ಲಕ್ಷ್ಮಣ ಮಾಂತವ್ವಳನ್ನು ಮದುವೆ ವಿಷಯ ಮಾತನಾಡುವುದಿದೆ ಬಾ ಎಂದು ಮುದ್ದೇಬಿಹಾಳದ ಸಂಗಮೇಶ್ವರ ನಗರದಲ್ಲಿ ಇರುವ ಸ್ನೇಹಿತರ ಬಾಡಿಗೆ ರೂಮ್ ಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಮೈ, ಕೈ ಮುಟ್ಟಲು ಶುರು ಮಾಡಿದಾಗ ಮಾಂತವ್ವ ನಿರಕಾರಿಸಿದ್ದಾಳೆ. ಬಳಿಕ ಮದುವೆಯಾಗುತ್ತೇನೆಂದು ನಂಬಿಸಿ, ನಾನೇ ನಿನ್ನ ಗಂಡ ಎಂದು ತಬ್ಬಿಕೊಂಡು ಬಲಾತ್ಕಾರ ಮಾಡಿದ್ದಾನೆ. ಬಹುಶಃ ಆಗಮ ಸಮಯ 3.30 ಆಗಿರಬಹುದು. ಅಂದಿನಿಂದ ಆಗಾಗ ಲಕ್ಷ್ಮಣ ಮಾಂತವಳೊಂದಿಗೆ ದೈಹಿಕ ಸಂಪರ್ಕ ಸಾಧಿಸುತ್ತಲೇ ಬಂದಿದ್ದಾನೆ.
ಕಳೆದೊಂದು ವರ್ಷದ ಹಿಂದೆ ಇಬ್ಬರ ವಿಷಯ ಮನೆಯಲ್ಲಿ ಗೊತ್ತಾಗಿ ರಾಜಿ ಪಂಚಾಯಿತಿ ಮಾಡಿಸಿ ಇಬ್ಬರಿಗೂ ತಮ್ಮ ಪಾಡಿಗೆ ತಾವಿರಲು ಸೂಚಿಸಲಾಗಿತ್ತು. ಆದರೂ ಲಕ್ಷ್ಮಣ ಮತ್ತೆ ಮದುವೆಯಾಗೋಣ ಬಾ ಎಂದು ವರಾತ ತೆಗೆದನು. ಕಡಿದು ಹೋದ ಸಂಬಂಧ ಮತ್ತೆ ಮುಂದುವರಿಯಿತು. 2022 ಡಿ.5 ರಂದು ಬೆಳಗ್ಗೆ 10ರ ಸುಮಾರಿಗೆ ಮರೋಳದಿಂದ ಕೂಡಲಸಂಗಮದ ಒಂದು ರೂಮಿಗೆ ಕರೆದೊಯ್ದು ಮತ್ತೆ ಬಲಾತ್ಕಾರ ಮಾಡಿದ. ಈ ವಿಷಯ ಲಕ್ಷ್ಮಣನ ದೊಡ್ಡಮನ ಮಗನಿಗೆ ಗೊತ್ತಾಗಿ ಆತ ಜಾತಿಯಿಂದ ಇಬ್ಬರೂ ಬೇರೆ ಬೇರೆಯಾಗಿದ್ದು, ಇನ್ನೆಂದೂ ಹಾಗೆ ಸೇರದಂತೆ ಮಾಂತವ್ವಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾನೆ. ಅಲ್ಲದೇ ಲಕ್ಷ್ಮಣ ಮದುವೆಯಾಗಲು ನಿರಾಕರಿಸುತ್ತಿದ್ದಾನೆ. ಹೀಗಾಗಿ ಈ ಇಬ್ಬರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಮಾಂತವ್ವ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಮುದ್ದೇಬಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಕ್ಷಣ ಕ್ಷಣದ ಮಹತ್ವದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)