ವಿಜಯಪುರ

ಕಾಂಗ್ರೆಸ್‌ನಿಂದ ಬಿಜೆಪಿಗೆ ಬರಲು ನಾಟಕ, ಶಾಸಕ ಯತ್ನಾಳ ಹೇಳಿದ ಆ ಇಬ್ಬರು ನಾಯಕರು ಯಾರು?

ವಿಜಯಪುರ: ವಿಧಾನ ಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ಜಿಲ್ಲಾ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳಾಗುತ್ತಿವೆ. ಕಾಂಗ್ರೆಸ್‌ನ ಪ್ರಭಾವಿ ಶಾಸಕರು ಬಿಜೆಪಿಗೆ ಬರುವರೆಂಬ ಗುಸುಗುಸು ಕೇಳಿ ಬರುತ್ತಿದ್ದ ಬೆನ್ನಲ್ಲೇ ಶಾಸಕ ಯತ್ನಾಳ ಹೊಸದೊಂದು ಬಾಂಬ್ ಸಿಡಿಸಿದ್ದಾರೆ.

ಕಾಂಗ್ರೆಸ್‌ನಿಂದ ಇಬ್ಬರು ಬಿಜೆಪಿಗೆ ಬರುವುದಕ್ಕೆ ನಾಟಕ ಮಾಡುತ್ತಿದ್ದಾರೆಂದು ಗುರುವಾರ ಸುದ್ದಿಗಾರರಿಗೆ ಅವರು ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿಗೆ ಬರಲು ಬಹಳ ಮಂದಿ ಕಾಯುತ್ತಿದ್ದಾರೆ. ವಿಜಯಪುರ ಜಿಲ್ಲೆಯ ಇಬ್ಬರು ಬಿಜೆಪಿಗೆ ಬರಲು ನಾಟಕ ಮಾಡುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಲೂಟಿ ಮಾಡಿ ಬಿಜೆಪಿಗೆ ಬರುತ್ತಿದ್ದಾರೆ. ಅವರೂ ಕಳ್ಳರೆ. ಇಂತಹ ಕಳ್ಳರು ಬಿಜೆಪಿಗೆ ಬರಬೇಕು ಅಂತಾ ಕಾಯುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಹಮಾಲಿ ಮಾಡೋದಕ್ಕೆ ಇದ್ದಾರಾ? ಎಂದವರು ಪ್ರಶ್ನಿಸಿದರು.

ಮೇಲಿನವರು ತೆಗೆದುಕೊಂಡರೆ ಕಾರ್ಯಕರ್ತರು ಮಾಡುತ್ತೇವಾ? ಕಳ್ಳರಿಗೆ ತೆಗೆದುಕೊಂಡರೆ ಸಿದ್ದಾಂತ ಎಲ್ಲಿ ಉಳಿಯುತ್ತದೆ? ಇಂಡಿಯಲ್ಲಿ ಹತ್ತು ಹನ್ನೆರಡು ಕ್ಯಾಂಡೇಟ್ ಓಡಾಡುತ್ತವೆ. ಅವರಿಗೆ ದುಡಿಸಿರಿ ನೀವು? ನೋಡಿ ಅವು ಸಾಲಾಗಿ ಕುಳಿತಿರುತ್ತವೆ. ಇಲ್ಲಿ ಬಬಲೇಶ್ವರದಲ್ಲೂ ಕುಳಿತಿರುತ್ತವೆ. ಕಾರಜೋಳ ಅವರು ಒಂದೆರೆಡು ಕ್ಯಾಂಡಿಡೇಟ್ ಹಿಡಿದುಕೊಂಡು ಬಂದಿದ್ದಾರೆ. ಮೊದಲನೇಯದ್ದು ಎರಡು ಕಾಂಡಿಡೇಟ್ ಬೇರೆ ಇವೆ. ಅಣ್ಣ ಕಾಂಗ್ರೆಸ್ ತಮ್ಮ ಬಿಜೆಪಿ. ಒಬ್ಬ ಸೋನಿಯಾಗಾಂಧಿಗೆ ಒಬ್ಬ ಪ್ರಾಣ ಕೊಡುತ್ತೇನೆ ಎನ್ನುತ್ತಾನೆ, ಮತ್ತೊಬ್ಬ ಮೋದಿಗೆ ಪ್ರಾಣ ಕೊಡುತ್ತೇನೆ ಎನ್ನುತ್ತಾರೆ. ಇಂಥವರನ್ನೆಲ್ಲ ತೆಗೆದುಕೊಂಡರೆ ಕಾರ್ಯಕರ್ತರ ಗತಿ ಏನು? ಎಂದರು.

error: Content is protected !!