ವಿಜಯಪುರ

ಗುಮ್ಮಟ ನಗರಿಯಲ್ಲಿ ಗಾಂಜಾ ಅಕ್ರಮ ಮಾರಾಟ, ಪೊಲೀಸರ ಚುರುಕಿನ ಕಾರ್ಯಾಚಾರಣೆ, ವಶಪಡಿಸಿಕೊಂಡ ಗಾಂಜಾ ಮೌಲ್ಯ ಎಷ್ಟು ಗೊತ್ತಾ?

ಸರಕಾರ್ ನ್ಯೂಸ್ ವಿಜಯಪುರ

ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಪೊಲೀಸರು ಅವರಿಂದ ಅಂದಾಜು 65 ಸಾವಿರ ರೂ.ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.

ವಿಜಯಪುರ ನಗರದ ಕಾಮತ ಹೋಟೆಲ್ ಬಳಿ ಗುರುವಾರ ಈ ಘಟನೆ ನಡೆದಿದ್ದು, ಗೋಳಗುಮ್ಮಟ ಠಾಣೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಥಳೀಯ ಹರಿಣಶಿಖಾರಿ ಕಾಲನಿ‌ ನಿವಾಸಿ ಮೋಹನ ಯಲ್ಲಪ್ಪ ಚವ್ಹಾಣ (42) ಹಾಗೂ ನವಬಾಗದ
ಅಬ್ದುಲ್ ಹಮ್ಮಿದ್ ಮುಧೋಳ (34) ಬಂಧಿತ ಆರೋಪಿಗಳು. ವೃತ್ತಿಯಲ್ಲಿ ಇಬ್ಬರೂ ಆಟೋ ಚಾಲಕರಿದ್ದಾರೆ.

ಕಾಮತ ಹೋಟೆಲ್ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಇವರಿಂದ ಒಟ್ಟು 3. 275ಕೆಜಿ ಒಣ ಗಾಂಜಾ ಹಾಗೂ 1390 ನಗದು ವಶಕ್ಕೆ ಪಡೆಯಲಾಗಿದೆ.

ಎಸ್ ಪಿ ಎಚ್ .ಡಿ. ಆನಂದಕುಮಾರ ಹಾಗೂ ಎಎಸ್ ಪಿ ಡಾ.ರಾಮ ಅರಸಿದ್ದಿ ಅವರು ಮಾರ್ಗದರ್ಶನದಲ್ಲಿ ಡಿವೈಎಸ್ ಪಿ ಲಕ್ಷ್ಮಿನಾರಾಯಣ, ಸಿಪಿಐ ರಮೇಶ ಅವಜಿ ನೇತೃತ್ವ ಮತ್ತು ಪಿಎಸ್ ಐ ಸೀತಾರಾಮ ಅವರನ್ನೊಳಗೊಂಡ ತಂಡ ದಾಳಿ ನಡೆಸಿದೆ.

error: Content is protected !!