ಗ್ರಾಪಂ ಅವ್ಯವಹಾರ ಪ್ರಶ್ನಿಸಿದ್ದಕ್ಕೆ ಹಲ್ಲೆ, ಅಧ್ಯಕ್ಷೆ ಮಕ್ಕಳಿಂದ ಜೀವ ಬೆದರಿಕೆ, ಎಲ್ಲಿ? ಏನಿದು ಪ್ರಕರಣ?
ಸರಕಾರ ನ್ಯೂಸ್ ಸಿಂದಗಿ
ಗ್ರಾಮ ಪಂಚಾಯಿತಿ ಎಂದರೆ ಒಂದಿಲ್ಲಾ ಒಂದು ಲಫಡಾ ಇರೋದೆ. ಅಂತೆಯೇ ಇಂಥದ್ದೊಂದು ಅವ್ಯವಹಾರ ಪ್ರಶ್ನಿಸಿದ್ದಕ್ಕೆ ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಪ್ರಕರಣ ಬೆಳಕಿಗೆ ಬಂದಿದೆ.
ದೇವರಹಿಪ್ಪರಗಿ ತಾಲೂಕಿನ ಕೊಂಡಗೂಳಿ ಗ್ರಾಮದ ನಾಯಿ ಹಳ್ಳದಲ್ಲಿ ಹುಸೇನಸಾಬ ಮಕ್ತುಮಸಾಬ ಸೋಲಾಪುರ (35) ಎಂಬಾತನ ಮೇಲೆ ಹಲ್ಲೆ ನಡೆದಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷೆಯ ಮಕ್ಕಳಾದ ಬಂದಗಿಸಾಬ ದಸಗೀರಸಾಬ ಮೋಮಿನ್ ಹಾಗೂ ಖಾದೀರಸಾಬ ದಸ್ತಗಿರಸಾಬ ಮೋಮಿನ ಇವರು ಹಲ್ಲೆ ನಡೆಸಿದ್ದಾರೆ.
ಪ್ರಕರಣದ ವಿವರ:
ಕೊಂಡಗೂಳಿ ಗ್ರಾಮ ಪಂಚಾಯಿತಿಯಲ್ಲಿ ಕಾಮಗಾರಿ ಮಾಡದೇ ಬಿಲ್ ತೆಗೆದ ಬಗ್ಗೆ ಹಾಗೂ ಕಳಪೆ ಕಾಮಗಾರಿ ಮಾಡಿರುವ ಬಗ್ಗೆ ಹುಸೇನಸಾಬ ಪ್ರಶ್ನೆ ಮಾಡಿದ್ದಲ್ಲದೇ ಜಿಲ್ಲಾ ಒಂಬುಡ್ಸಮನ್‌ಗೆ ದೂರು ನೀಡಿದ್ದನು. ಆ ಪ್ರಕಾರ ಓಂಬುಡ್ಸಮನ್ ಬಿ.ಜಿ. ಬಿರಾದಾರ ಜ. 11ರಂದು ಸಂಜೆ 4ರ ಸುಮಾರಿಗೆ ಸ್ಥಾನಿಕ ಪರಿಶೀಲನೆಗೆ ಆಗಮಿಸಿದ್ದರು. ಅಂಬಳನೂರ ನಾಯಿ ಹಳ್ಳದಲ್ಲಿ ಕಾಮಗಾರಿ ತೋರಿಸುತ್ತಿದ್ದಾಗ ಆರೋಪಿತರು ಬಂದು ಹಲ್ಲೆ ನಡೆಸಿದ್ದಾರೆ. ದೊಡ್ಡದಾದ ಕಲ್ಲು ಎತ್ತಿ ಎದೆಯ ಮೇಲೆ ಹಾಕಲು ಯತ್ನಿಸಿದ್ದು ಕಲ್ಲ ತೊಡೆಯ ಮೇಲೆ ಬಿದ್ದಿದೆ. ಗಾಯಾಳು ಹುಸೇನಸಾಬ ಧನ್ವಂತರಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಬಗ್ಗೆ ಕಲಕೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)