ಆಶಾ ಕಾರ್ಯಕರ್ತೆಯೊಂದಿಗೆ ಅಸಭ್ಯ ವರ್ತನೆ, ನೀ ಬೇಕೇ ಬೇಕು ಎಂದ, ಬಟ್ಟೆ ಎಳೆದು, ಮೈ ಮುಟ್ಟಿದ….ಮುಂದೇನಾಯ್ತು?
ಸರಕಾರ ನ್ಯೂಸ್ ಬ.ಬಾಗೇವಾಡಿ
ಆಶಾ ಕಾರ್ಯಕರ್ತೆಯನ್ನು 18 ತಿಂಗಳಿಂದ ಹಿಂಬಾಲಿಸುತ್ತಿದ್ದ ಯುವಕನೋರ್ವ ಕೊನೆಗೆ ಆಕೆಯನ್ನು ನಿರ್ಜನ ಪ್ರದೇಶದಲ್ಲಿ ಅಡ್ಡಗಟ್ಟೆ ಬಟ್ಟೆ ಎಳೆದು, ಮೈ ಮುಟ್ಟಿ ನೀ ನನಗೆ ಬೇಕೇ ಬೇಕು ಎಂದು ಅಸಭ್ಯವಾಗಿ ವರ್ತಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಬಸವನಬಾಗೇವಾಡಿ ತಾಲೂಕಿನ ನಂದಿಹಾಳ ಪಿಯು ಗ್ರಾಮದ ರೇಣುಕಾ ತಾಯಪ್ಪ ಮಾದರ ಎಂಬುವರು ಕಿರುಕುಳಕ್ಕೆ ಒಳಗಾಗಿದ್ದು, ಅದೇ ಗ್ರಾಮದ ಸುರೇಶ ಭೀಮಪ್ಪ ಮಾದರ ಎಂಬಾತ ಪೀಡಿಸಿದ ವ್ಯಕ್ತಿ.
ಏನಿದು ಪ್ರಕರಣ?
ರೇಣುಕಾ ಆಶಾಕಾಯರ್ತೆಯಾಗಿದ್ದರಿಂದ ನಂದಿಹಾಳ ಗ್ರಾಮದಿಂದ ಬಸವನಬಾಗೇವಾಡಿಗೆ ಹೋಗಿ ಕೆಲಸ ಮಾಡುತ್ತಾರೆ. ನಂದಿಹಾಳ ಗ್ರಾಮ ಬಸವನಬಾಗೇವಾಡಿಯಿಂದ 14 ಕಿಮೀ ದೂರದಲ್ಲಿದೆ. ಮತ್ತು ನೇರವಾಗಿ ಬಸ್ ಸೌಕರ್ಯ ಇರುವುದಿಲ್ಲ. ಬಸವನಬಾಗೇವಾಡಿಗೆ ಹೋಗಬೇಕಾದರೆ ವಿಜಯಪುರದಿಂದ ಬ.ಬಾಗೇವಾಡಿಗೆ ಬಿಜ್ಜರಾಜ್ಯ ಮಾರ್ಗಕ್ಕೆ 3 ಕಿಮೀ ನಡೆದು ಬಂದು ಬಸ್ಸಿಗೆ ಹೋಗಬೇಕಿದೆ. ಈ 3 ಕಿಮೀ ಸಂಪೂರ್ಣ ನಿರ್ಜನ ಪ್ರದೇಶವಾಗಿದೆ. ಇದೆಲ್ಲವನ್ನು ಗಮನಿಸಿ ಸುರೇಶ 18 ತಿಂಗಳಿಂದ ಬೈಕ್ ಮೇಲೆ ಹಿಂಬಾಲಿಸಿ ಪೀಡಿಸುತ್ತಾ ಬಂದಿದ್ದಾನೆ.
ಲೈಂಗಿಕ ಪ್ರಸ್ತಾಪ:
ಅಂತಿಮವಾಗಿ ಜ. 10ರಂದು ಸಂಜೆ 3.30ರ ಸುಮಾರಿಗೆ ಬ.ಬಾಗೇವಾಡಿಯಿಂದ ರೇಣುಕಾ ಮರಳಿ ಬರುತ್ತಿದ್ದಾಗ ನಂದ್ಯಾಳ ಕ್ರಾಸ್‌ನಲ್ಲಿ ಇಳಿದು ಹೊರಟಿದ್ದಾಗ ಬೈಕ್ ಮೇಲೆ ಬಂದ ಸುರೇಶ ಲೈಂಗಿಕ ಪ್ರಸ್ತಾಪ ಮಾಡಿ ಕಿರುಕುಳ ನೀಡಿದ್ದಾನೆ. ವಿಚಿತ್ರವಾಗಿ ಸನ್ನೆ ಮಾಡಿ ಅಸಭ್ಯವಾಗಿ ವರ್ತಿಸಿದ್ದಾನೆ. ಅಲ್ಲದೇ, ಊರತನಕ ಬಂದು ಜೀವ ಭಯ ಹಾಗಿದ್ದಾನೆ.
ಈ ಬಗ್ಗೆ ರೇಣುಕಾ ಬಸವನಬಾಗೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್‌ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್‌ಬಟನ್ ಪ್ರೆಸ್ ಮಾಡಿ)