ಧಾರವಾಡ

ನಿಮಗೂ ಬರಬಹುವುದು ಇಂಥ ಲಕೋಟೆ, ಹಣ ಕಳೆದುಕೊಂಡೀರಿ ಜೋಕೆ, ಐದು ಲಕ್ಷಕ್ಕೂ ಅಧಿಕ ಹಣ ವಂಚನೆ…..ಇಲ್ಲಿದೆ ಇಂಟ್ರೆಸ್ಟಿಂಗ್‌ ಕೇಸ್‌

ಸರಕಾರ್‌ ನ್ಯೂಸ್‌ ಧಾರವಾಡ

ಮನೆಗೆ ಬಂದ ಲಕೋಟೆ ತೆಗೆದು ಅದರಲ್ಲಿದ್ದ ಸ್ಕ್ರ್ಯಾಚ್‌ ಕಾರ್ಡ್‌ ಅಳಿಸಿ ನೋಡಲಾಗಿ 29 ಲಕ್ಷ ರೂಪಾಯಿಗೂ ಅಧಿಕ ಬಹುಮಾನ ಬರುವುದೆಂಬ ಮೋಸದ ಜಾಲ ನಂಬಿದ ನಾಗರಿಕನೋರ್ವ ಐದು ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡಿದ್ದಾನೆ.

ಹೌದು, ಧಾರವಾಡದ ತಾಡಕೋಡ ಹಳ್ಳಿಯ ಗುಡಿ ಓಣಿಯ ನಿವಾಸಿ ರಾಜಾರಾಮ ಗೋಪಾಲಭಟ ಜೋಶಿ ವಂಚನೆಗೆ ಒಳಗಾದ ಅಮಾಯಕರು.

ಮನೆಗೆ ಅಂಚೆ ಮುಖಾಂತರ ಒಂದು ಲಕೋಟೆ ಬಂದಿದ್ದು ಅದನ್ನು ತೆಗೆದು ನೋಡಲಾಗಿ ಅದರಲ್ಲಿ ಮೀಶೊ ಅಂತಾ ಬರೆದ ಪತ್ರವಿತ್ತು. ಅದರಲ್ಲಿ ಒಂದು ಸ್ಕ್ರ್ಯಾಚ್‌ ಕಾರ್ಡ್‌ ಇದ್ದು ಅದನ್ನು ಸ್ಕ್ರ್ಯಾಚ್‌ ಮಾಡಿದ್ದಾರೆ. ಬಳಿಕ ಅದರಲ್ಲಿ ಕಂಗ್ರಾಜುಲೇಶನ್‌ ಯು ವಿನ್‌ ಮಹಿಂದ್ರಾ ಎಕ್ಸ್‌ಯುವಿ 700. ಪ್ರೈಜ್‌ ಕೋಡ್‌: ಎನ್‌ಎಟಿಒ2208ಅಂತಾ ಬರೆದಿತ್ತು. ಬಳಿಕ ರಾಜಾರಾಮ ಅವರು ತಮ್ಮ ಮೊಬೈಲ್‌ನಿಂದ ಪತ್ರದಲ್ಲಿದ್ದ ಸಂಪರ್ಕ ಸಂಖ್ಯೆಗೆ ಕರೆ ಮಾಡಲಾಗಿ ಸ್ಕ್ರ್ಯಾಚ್‌ ಕಾರ್ಡ್‌ ಬದಲಾಗಿ 29,60,000 ರೂಪಾಯಿಗಳನ್ನು ಪಡೆದುಕೊಳ್ಳಬಹುದು, ಅದಕ್ಕಾಗಿ ವಿವಿಧ ಚಾರ್ಜ್‌ ಕಟ್ಟಬೇಕೆಂದು ಹೇಳಿದ್ದಾರೆ. ಇದನ್ನು ನಂಬಿದ ರಾಜಾರಾಮ ಅವರು ಹಂತ ಹಂತವಾಗಿ ಒಟ್ಟು 5,24,800 ರೂಪಾಯಿ ಹಾಕಿದ್ದಾರೆ. ಆದರೆ, ಕರೆ ಸ್ವೀಕರಿಸಿದ ವ್ಯಕ್ತಿ ವಾಟ್ಸಪ್‌ ಮುಖಾಂತರ ನಕಲಿ ಚೆಕ್‌ ಕಳುಹಿಸಿ ವಂಚನೆ ಮಾಡಿದ್ದಾರೆ.

ಈ ಬಗ್ಗೆ ರಾಜಾರಾಮ ಅವರು ಧಾರವಾಡ ಸೈಬರ್‌ ಠಾಣೆಗೆ ದೂರು ನೀಡಿದ್ದು, ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸಿದಾರೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್‌ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!