ವಿಜಯಪುರ

ಹಿಂದೂ-ಲಿಂಗಾಯತ ಎರಡೂ ಬೇರೆ ಬೇರೆಯಾ? ವಚನಾನಂದ ಸ್ವಾಮೀಜಿ ಪ್ರತಿಕ್ರಿಯೆ ಏನು ಗೊತ್ತಾ?

ಸರಕಾರ ನ್ಯೂಸ್ ವಿಜಯಪುರ

  1. ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ !

ಹಿಂದು ಧರ್ಮಕ್ಕೂ- ಲಿಂಗಾಯತಕ್ಕೂ ಸಂಬಂಧವಿಲ್ಲವೆಂದು ಕೆಲವರ ವಾದವಾದರೆ ಇನ್ನೂ ಕೆಲವರು ಎರಡೂ ಒಂದೇ ಎಂಬ ವಿಚಾರ ಮಂಡಿಸುತ್ತಾರೆ. ಇದೀಗ ಮತ್ತೆ ವಾಗ್ವಾದ ಶುರುವಾಗಿದ್ದು ಈ ಬಗ್ಗೆ ಪೂಜ್ಯ ವಚನಾನಂದ ಸ್ವಾಮೀಜಿ ಹೇಳಿದ್ದೇನು ನೋಡೋಣ ಬನ್ನಿ.

ಹಿಂದೂ ಧರ್ಮ ಹಾಗೂ ಲಿಂಗಾಯತ ಧರ್ಮ ಒಂದೇ ಎಂದು  ಹರಿಹರದ ಪಂಚಮಸಾಲಿ ಪೀಠದ ಪೀಠಾಧಿಪತಿ ವಚನಾನಂದ ಸ್ವಾಮೀಜಿ ಹೇಳಿದರು.

ಇಲ್ಲಿನ ಜ್ಞಾನಯೋಗಾಶ್ರಮದಲ್ಲಿ ಸೋಮವಾರ ನಡೆದ ಕಾರ್ಯಕ್ರಮವೊಂದರ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು‌, ಲಿಂಗಾಯತರೆಲ್ಲರೂ ಹಿಂದೂಗಳೇ, ಹಿಂದೂ ಎಂಬ ಮಹಾಸಾಗರದಲ್ಲಿ ಬೌದ್ಧ, ಜೈನ್, ಸಿಖ್, ವೀರಶೈವ -ಲಿಂಗಾಯತ, ವೈಷ್ಟವ ಎಂಬ ನದಿಗಳು ವಿಲೀನವಾಗಿವೆ ಎಂದು ಮಾರ್ಮಿಕವಾಗಿ ನುಡಿದರು.

ಶಂಕರಾಚಾರ್ಯ, ಮದ್ವಾಚಾರ್ಯ, ರಾಮಾನುಜಾಚಾರ್ಯ, ಗುರುನಾನಕ್‌, ಜ್ಞಾನೇಶ್ವರ, ಬಸವಣ್ಣನವರು ಆಯಾ ಕಾಲ ಘಟ್ಟದಲ್ಲಿ ತಮ್ಮ ತಮ್ಮ ವಿಚಾರಧಾರೆ ಹೇಳಿದ್ದಾರೆ. ಅವು ಧರ್ಮಗಳ ರೂಪ ಪಡೆದುಕೊಂಡಿವೆ ಎಂದರು.

ಕರ್ನಾಟಕದಲ್ಲಿ 12ನೇ ಶತಮಾನದಲ್ಲಿ ಬಸವಣ್ಣ ಜಗತ್ತಿಗೆ ಹೊಸದನ್ನು ಕೊಟ್ಟರು. ಬಸವಣ್ಣನವರ ವಿಚಾರಗಳನ್ನು ಯಾವುದೇ ಧರ್ಮಕ್ಕೆ ಸೀಮಿತ ಮಾಡಬಾರದು, ಯಾವುದೇ ಮಹಾನ್ ವ್ಯಕ್ತಿಗಳ ವಿಚಾರಗಳನ್ನು ಅನುಕರಣೆ ಮಾಡುವವರನ್ನು ಟೀಕೆ ಮಾಡಬಾರದು, ನಾವೇ ಶ್ರೇಷ್ಠ, ಅವರು ಕನಿಷ್ಠ ಎಂದು ಟೀಕಿಸಬಾರದು ಎಂದು ಹೇಳಿದರು.

ಒಂದು ಧರ್ಮದ ಆಚರಣೆಗಳನ್ನು ಕೀಳಾಗಿ ಕಾಣುವುದು ಒಳಿತಲ್ಲ, ಮತ್ತೊಂದು ತತ್ವಗಳನ್ನು ತುಚ್ಛವಾಗಿ ಕಾಣಬಾರದು,
ಎಲ್ಲವೂ ಒಂದೇ ಎಂದರು.

error: Content is protected !!