ವಿಜಯಪುರ

ತನಿಷ್ಕಾ ಜೆವೆಲರ್ಸ್‌ನಲ್ಲಿ ಬುರ್ಖಾಧಾರಿಗಳಿಂದ ಕಳ್ಳತನ, ಕಳುವಾದ ಚಿನ್ನದ ಮೌಲ್ಯ ಕೇಳಿದರೆ ಬೆಚ್ಚಿ ಬೀಳೋದು ಪಕ್ಕಾ !

ಸರಕಾರ ನ್ಯೂಸ್‌ ವಿಜಯಪುರ

ಇಲ್ಲಿನ ಗುರುಕುಲ ರಸ್ತೆಯಲ್ಲಿರುವ ತನಿಷ್ಕಾ ಜೆವೆಲ್ಲರ್ಸ್‌ನಲ್ಲಿ ಬುರ್ಖಾಧಾರಿಗಳಿಂದ ಭಾರಿ ಪ್ರಮಾಣದ ಚಿನ್ನಾಭರಣ ಕಳುವಾಗಿದೆ !

ನ.4ರಂದೇ ಈ ಘಟನೆ ನಡೆದಿದ್ದು, ಸಿಸಿಟಿವಿ ಪರಿಸೀಲಿಸಿ ಬಳಿಕ ಗಾಂಧಿ ಚೌಕ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ತನಿಷ್ಕಾ ಜೆವೆಲರ್ಸ್‌ ಶೋ ರೂಂ ಮ್ಯಾನೇಜರ್‌ ಸಿದ್ದು ಈರಣ್ಣ ರೇವಿ ದೂರು ನೀಡಿದ್ದು, ದೂರಿನಲ್ಲಿ ಶೋರೂಮ್‌ಗೆ ಬಂದ ಬುರ್ಖಾಧಾರಿಗಳೇ ಈ ಕೃತ್ಯ ಎಸಗಿದ್ದಾರೆಂದು ತಿಳಿಸಿದ್ದಾರೆ.

ಏನಿದು ಪ್ರಕರಣ?

ನ. 4ರಂದು ಸಂಜೆ ಬುರ್ಖಾಧಾರಿಗಳಿಬ್ಬರು ಶೋ ರೂಮ್‌ಗೆ ಬಂದಿದ್ದಾರೆ. ಅವರಿಗೆ ಶೋ ರೂಮ್‌ನಲ್ಲಿ ಕೆಲಸ ಮಾಡುವ ಪೂರ್ಣಿಮಾ ತೇಲಕರ ಎಂಬುವರು ಡೋಲ್‌ಗೆ ಹಾಕಿದ ಬಂಗಾರದ ಆಭರಣ ತೋರಿಸಿದ್ದಾರೆ. ನಂತರ ಆ ಇಬ್ಬರು ಬುರ್ಖಾಧಾರಿಗಳು 18 ಕ್ಯಾರೆಟ್‌ನಲ್ಲಿ ಬಂಗಾರದ ತಾಳಿ ತೋರಿಸಿ ಎಂದಿದ್ದು, ಆಗ ಪೂರ್ಣಿಮಾ ಮೊದಲು ತೋರಿಸಿದ ಡೋಲ್‌ಗೆ ಹಾಕಿದ ಬಂಗಾರದ ಆಭರಣ ಕೌಂಟರ್ ನಲ್ಲಿಯೇ ಬಿಟ್ಟು ಬೇರೆ ಬಂಗಾರದ ಆಭರಣಗಳನ್ನು ತೆಗೆದು ತೋರಿಸಿದ್ದಾರೆ. ನಂತರ ಆ ಇಬ್ಬರು ಬುರ್ಖಾಧಾರಿಗಳು ತಮಗೆ ಡಿಸೈನ್‌ ಪಸಂದ್‌ ಇಲ್ಲವೆಂದು ಹೊರಗೆ ಹೋಗಿದ್ದಾರೆ.

ಜೇವರಗಿ -ಸಿಂದಗಿ ಬಸ್‌ನಲ್ಲಿ ಕಳ್ಳತನ, ಕಳುವಾದ ಚಿನ್ನಾಭರಣದ ಮೌಲ್ಯ ಕೇಳಿದರೆ ಬೆಚ್ಚಿ ಬೀಳೋದು ಗ್ಯಾರಂಟಿ

ಕಳ್ಳತನ ಗಮನಕ್ಕೆ ಬಂದಿದ್ದು ಹೇಗೆ?

ರಾತ್ರಿ ಅಂಗಡಿಯಲ್ಲಿದ್ದ ಬಂಗಾರದ ಆಭರಣಗಳನ್ನು ಕೌಂಟಿಂಗ್‌ ಮಾಡಿದಾಗ ಒಂದು ಆಭರಣ ಕಡಿಮೆ ತೋರಿಸಿದೆ. ಬಳಿಕ ಸಿಸಿ ಟಿವಿ ಕ್ಯಾಮೆರಾ ಪರಿಶೀಲಿಸಲಾಗಿ ಪೂರ್ಣಿಮಾ ಬಂಗಾರದ ಆಭರಣಗಳನ್ನು ತೋರಿಸುವಾಗ ಬುರ್ಖಾಧಾರಿಗಳು ಕೌಂಟರ್‌ ಮೇಲಿಟ್ಟಿದ್ದ ಡೋಲ್‌ಗೆ ಹಾಕಲ್ಪಟ್ಟಿದ್ದ ಚಿನ್ನದ ಸರ ಕದ್ದಿರುವುದು ಗೊತ್ತಾಗಿದೆ. ಪೂರ್ಣಿಮಾಳ ಗಮನ ಬೇರೆ ಕಡೆ ಸೆಳೆದಿರುವ ಬುರ್ಖಾಧಾರಿಗಳು ಚಿನ್ನದ ಸರ ಕದ್ದುಕೊಂಡು ಹೋಗಿದ್ದಾರೆ.

ಅಂದ ಹಾಗೆ ಕಳುವಾದ ಬಂಗಾರದ ಆಭರದಣ ಬೆಲೆ 1,20,284 ರೂ. ಎಂದು ಅಂದಾಜಿಸಲಾಗಿದ್ದು, 22 ಕ್ಯಾರೆಟ್‌ನ 16.62 ಗ್ರಾಂ ತೂಕದ್ದಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!