ಐತಿಹಾಸಿಕ ಗುಮ್ಮಟನಗರಿಯಲ್ಲಿ ಗುಂಡಿನ ದಾಳಿ, ಘಟನೆಗೆ ಕಾರಣವೇನು ಗೊತ್ತಾ?
ಸರಕಾರ ನ್ಯೂಸ್ ವಿಜಯಪುರ
ಐತಿಹಾಸಿಕ ಗುಮ್ಮಟ ನಗರಿಯಲ್ಲಿ ಶುಕ್ರವಾರ ಗುಂಡಿನ ದಾಳಿ ನಡೆದಿದ್ದು ಓರ್ವ ಗಂಭೀರ ಗಾಯಗೊಂಡಿದ್ದಾನೆ !
ಇಲ್ಲಿ ಗೋಳಗುಮ್ಮಟ ಹತ್ತಿರದ ಬೆಂಡಿಗೇರಿ ಗಲ್ಲಿಯಲ್ಲಿ ಈ ಘಟನೆ ನಡೆದಿದ್ದು ಶೋಹೇಬ್ ಕಕ್ಕಳಮೇಲಿ ಎಂಬಾತ ಗಾಯಗೊಂಡಿದ್ದಾನೆ. ಗಾಯಾಳು ಶೋಹೇಬ್‌ನನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಯಾರು ಮಾಡಿದ್ದು? ಹೇಗಾಯಿತು?
ಕಳೆದ ವಿಧಾನ ಸಭೆ ಚುನಾವಣೆ ಸಂದರ್ಭ ನಡೆದ ರೌಡಿಶೀಟರ್ ಹೈದರ ಅಲಿ ನದಾಫ್ ಹತ್ಯೆ ಪ್ರಕರಣವೇ ಘಟನೆಗೆ ಕಾರಣ ಎನ್ನಲಾಗಿದೆ. ಮೇ 6ರಂದು ಚಾಂದಪುರ ಕಾಲನಿಯಲ್ಲಿ ಹೈದರ್ ಅಲಿ ನದಾಫ್ ಮೇಲೆ ಗುಂಡಿನ ದಾಳಿ ನಡೆದು ಹೈದರ್ ಅಲಿ ಅಸುನೀಗಿದ್ದನು. ಪ್ರಕರಣಕ್ಕೆ ಸಂಬಂಧಿಸಿದಂತೆ ಶೇಖಅಹಮ್ಮದ್ ಮೋದಿ, ಸೈಯದ್ ಖಾದ್ರಿ, ಶಾನ್‌ವಾಜ್ ದಫೇದಾರ್, ಫಯಾಜ್ ಮುರ್ಶದ್, ಮೈಬೂಬ್ ಮಿರಜಕರ ಮತ್ತಿತರರ ಮೇಲೆ ದೂರು ದಾಖಲಾಗಿತ್ತು. ತನಿಖೆ ಭಾಗವಾಗಿ ಪೊಲೀಸರು ನ್ಯಾಯಾಲಯಕ್ಕೆ ಇತ್ತೀಚೆಗಷ್ಟೇ ಚಾರ್ಜ್‌ಶೀಟ್ ಕೂಡ ಸಲ್ಲಿಸಿದ್ದರು.
ತನಿಷ್ಕಾ ಜೆವೆಲರ್ಸ್‌ನಲ್ಲಿ ಬುರ್ಖಾಧಾರಿಗಳಿಂದ ಕಳ್ಳತನ, ಕಳುವಾದ ಚಿನ್ನದ ಮೌಲ್ಯ ಕೇಳಿದರೆ ಬೆಚ್ಚಿ ಬೀಳೋದು ಪಕ್ಕಾ !
ಸದ್ಯ ಗುಂಡಿನ ದಾಳಿಗೊಳಗಾದ ಶೋಹೇಬ್ ಕೊಲೆ ಪ್ರಕರಣದ ಆರೋಪಿ ಶೇಖಅಹಮ್ಮದ್ ಮೋದಿ ಅಳಿಯ ಎನ್ನಲಾಗಿದೆ. ಶುಕ್ರವಾರ ಸಂಜೆ ಶೋಹೇಬ್ ಸ್ನೇಹಿತರಗೊಂದಿಗೆ ಹೊರಟಿದ್ದ ವೇಳೆ ಏಕಾಏಕಿ ಗುಂಡಿನ ದಾಳಿ ನಡೆದಿದೆ. ದಾಳಿ ನಡೆಸಿದವರು ಮೃತ ಹೈದರ್ ಅಲಿ ನದಾಫ್ ಕಡೆಯವರು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಎಸ್‌ಪಿ ಋಷಿಕೇಶ ಸೋನಾವನೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್‌ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)