ವಿಜಯಪುರ

ಭೀಕರ ಅಪಘಾತಕ್ಕೆ ನಾಲ್ವರ ಬಲಿ, ಎಲ್ಲಿ? ಹೇಗಾಯಿತು ಗೊತ್ತಾ?

ಸರಕಾರ ನ್ಯೂಸ್ ಮುದ್ದೇಬಿಹಾಳ

ಕಾರ್‌ ಮತ್ತು ಕ್ಯಾಂಟರ್ ನಡುವೆ ಸಂಭವಿಸಿದ ಭೀಕರ ಅಪಘಾತಕ್ಕೆ ನಾಲ್ವರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.

ಬಾಗಲಕೋಟೆ ಜಿಲ್ಲೆ‌ ಹುನಗುಂದ ಠಾಣೆ ವ್ಯಾಪ್ತಿಯ ಹುನಗುಂದ-ತಾಳಿಕೋಟೆ ರಾಜ್ಯ ಹೆದ್ದಾರಿಯ ಧನ್ನೂರ ಟೋಲ್ ಹತ್ತಿರ ಗುರುವಾರ ಬೆಳಗಿನ ಜಾವ ಈ ಘಟನೆ ನಡೆದಿದೆ.

ಮುದ್ದೇಬಿಹಾಳ ತಾಲೂಕು ಬಿದರಕುಂದಿ ಗ್ರಾಮದರು. ಪ್ರ ಥಮ ದರ್ಜೆ ಗುತ್ತಿಗೆದಾರ ಲಕ್ಷ್ಮಣ ವಡ್ಡರ, ಬೈಲಪ್ಪ ಬಿರಾದಾರ, ಮುದ್ದೇಬಿಹಾಳದ ರಾಮಣ್ಣ ನಾಯಕಮಕ್ಕಳ ಮತ್ತು ಕಾರ್ ಚಾಲಕ ಗುಡ್ನಾಳದ ಮಹ್ಮದರಫೀಕ ಎಂದು ಗುರ್ತಿಸಲಾಗಿದೆ. ಹೊಸಪೇಟೆ ಹತ್ತಿರ ಇರುವ ದೇವಸ್ಥಾನವೊಂದಕ್ಕೆ ಹೋಗಿ ಮರಳಿ ಬರುವಾಗ ಈ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ‌

ಘಟನಾ ಸ್ಥಳಕ್ಕೆ ಬಾಗಲಕೋಟ ಜಿಲ್ಲೆ ಹುನಗುಂದ ಪೊಲೀಸ್ ಠಾಣೆ ಸಿಬ್ಬಂದಿ ದೌಢಾಯಿಸಿದ್ದು ಕಾರ್ಯಾಚರಣೆ ಚುರುಕುಗೊಂಡಿದೆ.

(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)

error: Content is protected !!