ಯುರೋಪ ಅಮೇರಿಕಾ ಇರಾನ್ ರಷ್ಯಾದಲ್ಲಿ ಯುದ್ದ ಹೆಚ್ಚಲಿದೆ, ಬಬಲಾದಿ ಸದಾಶಿವನ ಕಾಲಜ್ಞಾನದ ರಹಸ್ಯ ಇಲ್ಲಿದೆ ನೋಡಿ
ವಿಜಯಪುರ: ರಷ್ಯಾ-ಯುಕ್ರೇನ್ ನಡುವಿನ ಯುದ್ದ ತಾರಕಕ್ಕೇರಿರುವಾಗಲೇ ಮತ್ತೊಂದು ಯುದ್ಧ ಭೀತಿ ಶುರುವಾಗಿದೆ !
ಕಾಲಜ್ಞಾನಕ್ಕೆ ಹೆಸರಾದ ಬಬಲಾದಿ ಸದಾಶಿವ ಮೂಲ ಸಂಸ್ಥಾನದಿಂದ ಭಯಂಕರ ಭವಿಷ್ಯ ಹೊರಬಿದ್ದಿದ್ದು ‘ಯುರೋಪ ಅಮೇರಿಕಾ ಇರಾನ್ ರಷ್ಯಾದಲ್ಲಿ ಯುದ್ದ ಹೆಚ್ಚಲಿದೆ ಎಂದು ಮಠದ ಪೂಜ್ಯರಾದ ವೇ.ಮೂ. ಸಿದ್ರಾಮಯ್ಯ ಹೊಳಿಮಠ ಭವಿಷ್ಯ ನುಡಿದರು. ಏಪ್ರಿಲ್‌ನಿಂದ ಆಗಸ್ಟ್‌ನೊಳಗಡೆ ಪಾಪ ಕೈ ಮೀರಿ ಹೋಗಲಿದೆ. ಯುರೋಪ ಅಮೇರಿಕಾ ಇರಾನ್ ರಷ್ಯಾದಲ್ಲಿ ಯುದ್ದ ಹೆಚ್ಚಾಗಲಿದೆ ನಾ ಮುಂದು-ತಾ ಮುಂದು ಎಂದು ಕಲಹ ನಡೆಸಲಾಗುವುದು.
ಕೈ ಬಳೆ ಒಡೆದಾವು, ಕಣ್ಣೀರು ಉದುರ್ಯಾವು, ಕೆಲವು ಕಡೆ ತಂತ್ರ-ಅತಂತ್ರ ತಂತ್ರಜ್ಞಾನ. ಮುಂದೆ ಪಾಪ ಹೆಚ್ಚಾಗಿ ಕಲಿಪುರುಷನ ಆಟ ಭೀಕರವಾಗಲಿದೆ. ಅತೀವೃಷ್ಠಿ-ಅನಾವೃಷ್ಠಿ ಹೆಚ್ಚಾಗಲಿದೆ. ದೇಶದಲ್ಲಿ ಶಾಂತಿ ಸೌಹಾರ್ದತೆಯ ಕೊರತೆ ಇದೆ. ಕೀಟ ನಾಶ ಆದೀತು, ಗಾಳಿ-ಸುನಾಮೀ ಆದೀತು. ಏಳಾಣೆ ಮಳೆ, ಎಂಟಾಣೆ ಬೆಳಿ ಬರಲಿದೆ ಎಂದು ಭವಿಷ್ಯ ನುಡಿದರು.