ದೇವರಿಗೆ ನೈವೇದ್ಯ ನೀಡಲು ಹೋದಾಗ ಬಡಿದ ಸಿಡಿಲು, ಮಹಿಳೆ ಸಾವು !!!!
ಸರಕಾರ ನ್ಯೂಸ್ ಇಂಡಿ
ದೇವರಿಗೆ ನೈವೇದ್ಯ ನೀಡಲೆಂದು ಹೋದ ಮಹಿಳೆ ಸಿಡಿಲು ಬಡಿದು ಸಾವಿಗೀಡಾಗಿರುವ ಘಟನೆ ಭಕ್ತರ ಮನ ಕಲಕುತ್ತಿದೆ !
ಇಂಡಿ ತಾಲೂಕಿನ ತಾಂಬಾ ಗ್ರಾಮದಲ್ಲಿ ಶುಕ್ರವಾರ ಸಂಜೆ ಬಡಿದ ಬರಸಿಡಿಲಿಗೆ ಭಾರತಿ ಹಣಮಂತ ಕೆಂಗನಾಳ (40) ಎಂಬುವವರು ಸಾವಿಗೀಡಾಗಿದ್ದಾರೆ. ಜಮೀನಿನಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿದ್ದ ಇವರು ಮಳೆ ಬರುತ್ತಿದ್ದಂತೆ ಏಳುಮಕ್ಕಳ ತಾಯಿ (ದೇವರು)ಗೆ ನೈವೇದ್ಯ ಹಿಡಿಯಲು ಹೋದಾಗ ಈ ಅವಘಡ ಸಂಭವಿಸಿದೆ. ಕುತ್ತಿಗೆ ಬಳಿ ಗಂಭೀರ ಗಾಯವಾಗಿದ್ದು, ಸ್ಥಳದಲ್ಲಿಯೇ ಅಸುನೀಗಿದ್ದಾರೆ.
ಬಿಸಿಲೂರಿನಲ್ಲಿ ವರುಣಾಘಾತ, ಸಿಡಿಲಿಗೆ ಇಬ್ಬರು ಬಲಿ ! ಅಯ್ಯೋ ದುರ್ವಿಧಿಯೇ…!!!
ಇನ್ನು ಚಡಚಣ ತಾಲೂಕಿನ ಶಿರಾಡೋಣ ಗ್ರಾಮದಲ್ಲಿ ಮಹಾದೇವ ರಕಮಾಜಿ ಪಾಂಡೆ ಎಂಬುವರ ಜಮೀನಿನಲ್ಲಿ ಎಮ್ಮೆಗೆ ಸಿಡಿಲು ಬಡಿದಿದ್ದು ಸಾವೀಗೀಡಾಗಿದೆ. ಸಿಡಿಲಿನ ಆರ್ಭಟ ಪದೇ ಪದೇ ಜೀವ ಹಾನಿ ಹೆಚ್ಚಿಸುತ್ತಿದ್ದು ಜನ ಆತಂಕಗೊಂಡಿದ್ದಾರೆ.
ಗುರುವಾರವಷ್ಟೇ ಇಂಡಿ ತಾಲೂಕಿನ ಹಿರೇಮಸಳಿಯಲ್ಲಿ ಸಿಡಿಲಿಗೆ ಬಲಿ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ಕೃಷಿ ಕಾರ್ಯದಲ್ಲಿ ತಲ್ಲೀನವಾಗಿದ್ದ ಅನ್ನದಾತ ಸೋಮಶೇಖರ ಕಾಶಿನಾಥ ಪಟ್ಟಣಶೆಟ್ಟಿ (43) ಜೀವ ತೆತ್ತಿದ್ದರು. ಶುಕ್ರವಾರ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಇತ್ತ ಹಿರೇಮಸಳಿ ಪಕ್ಕದ ತಾಂಬಾದಲ್ಲಿ ಭಾರತಿ ಕೆಂಗನಾಳ ಕೂಡ ಸಿಡಿಲಿನ ಹೊಡೆತಕ್ಕೆ ಮೃತಪಟ್ಟಿದ್ದಾರೆ. ವಿಧಿಯ ಅಟ್ಟಹಾಸಕ್ಕೆ ಜನ ಹಿಡಿ ಶಾಪ ಹಾಕುತ್ತಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)