ನಮ್ಮ ವಿಜಯಪುರ

ಬಸ್‌ಗಳಿಗಾಗಿ ಪ್ರಯಾಣಿಕರ ಪರದಾಟ, ಮೋದಿ ಕಾರ್ಯಕ್ರಮಕ್ಕೆ 425 ಬಸ್ ಕಾರ್ಯಾಚರಣೆ

ಸರಕಾರ‌ ನ್ಯೂಸ್ ವಿಜಯಪುರ

ಕಲರಬುಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಬಸ್‌ಗಳನ್ನು ಕಾರ್ಯಾಚರಿಸಿದ ಕಾರಣ ಇತ್ತ ಪ್ರಯಾಣಿಕರು ತೀವ್ರ ಪರದಾಟ ನಡೆಸಿದರು.

ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಪ್ರಯಾಣಿಕರು ಬಸ್‌ಗಾಗಿ ಪರದಾಡಿದರು. ಜಿಲ್ಲಾಧಿಕಾರಿ ನಿರ್ದೇಶನದಂತೆ 73 ಬಸ್ಸುಗಳು ಹಾಗೂ ಕೇಂದ್ರ ಕಚೇರಿಯ ನಿರ್ದೇಶನದಂತೆ ಕಲಬುರಗಿ ವಿಭಾಗ-1 ಮತ್ತು 2 ರಿಂದ 352 ವಾಹನಗಳು ಸೇರಿ ಒಟ್ಟು 425 ಬಸ್ಸುಗಳನ್ನು ವಿಜಯಪುರ ವಿಭಾಗದ ಎಲ್ಲ ಘಟಕಗಳಿಂದ ಕರಾರು ಒಪ್ಪಂದದ ಮೇರೆಗೆ ಒದಗಿಲಾಗಿತ್ತು.

ಮಳಖೇಡ ಕರಾರು ಒಪ್ಪಂದಕ್ಕೆ ವಿಭಾಗದಿಂದ 425 ವಾಹನಗಳು ಕಾರ್ಯಾಚರಣೆ ಆಗುತ್ತಿರುವುದರಿಂದ ಜಿಲ್ಲೆಯ ಸ್ಥಳೀಯ ಸಾರಿಗೆಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಯಿತು. ಹೀಗಾಗಿ ಪ್ರಯಾಣಿಕರು ಖಾಸಗಿ ವಾಹನದ ಮೊರೆ ಹೋದರದಲ್ಲದೇ ಹೆಚ್ಚಿನ ದರ ನಿಗದಿಗೆ ತೊಂದರೆ ಅನುಭವಿಸಿದರು.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)

error: Content is protected !!