ನಮ್ಮ ವಿಜಯಪುರ

ಸಂಸದರ ಮಾಜಿ ಡ್ರೈವರ್ ನ ಮರ್ಡರ್ ! ತಲೆ ಮೇಲೆ ಕಲ್ಲು ಎತ್ತಿಹಾಕಿ ಭೀಕರ ಕೊಲೆ….!!!

ಸರಕಾರ ನ್ಯೂಸ್ ವಿಜಯಪುರ

ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ‌ನ್ನು ಬರ್ಬರವಾಗು ಹತ್ಯೆಗೈದ ಘಟನೆ ಗುರುವಾರ ಆಲಕುಂಟೆ ನಗರದಲ್ಲಿ ನಡೆದಿದೆ.

ಮಲ್ಲಿಕಾರ್ಜುನ ದೊಡಮನಿ (43) ಹತ್ಯೆಗೀದಾಡ ವ್ಯಕ್ತಿ. ರಾತ್ರಿ ಅಥವಾ ನಸುಕಿನ ಜಾವದಲ್ಲಿಯೇ ಈ ಘಟನೆ ನಡೆದಿದೆ ಎನ್ನಲಾಗಿದೆ.

ಆಟೋ ಚಾಲಕನಾಗಿದ್ದ ಮಲ್ಲಿಕಾರ್ಜುನ
ಈ ಹಿಂದೆ ವಿಜಯಪುರ ಸಂಸದ ರಮೇಶ ಜಿಗಜಿಣಗಿ ವಾಹನ ಚಾಲಕನಾಗಿ ಕೆಲಸ ಮಾಡಿದ್ದನು.

ಕಳೆದ ಮೂರು ವರ್ಷದ ಹಿಂದೆ ಜಿಗಜಿಣಗಿ ಬಳಿ ಕೆಲಸ ಬಿಟ್ಟಿದ್ದ
ಮಲ್ಲಿಕಾರ್ಜುನ ಬಳಿಕ ಅಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದನು.
ಹಣಕಾಸಿನ‌ ವ್ಯವಹಾರವೇ ಮಲ್ಲಿಕಾರ್ಜುನ ಕೊಲೆಗೆ ಕಾರಣ ಎನ್ನುವ ಸಂಶಯ ವ್ಯಕ್ತವಾಗಿದೆ.
ಇತ್ತೀಚೆಗೆ ಸರಿಯಾಗಿ ಕೆಲಸಕ್ಕೆ ಹೋಗದೇ ಅಲಾದಾಡುತ್ತಿದ್ದ
‌ನಗರದ ಬಾಡರ ಓಣಿಯ ನಿವಾಸಿ ಮಲ್ಲಿಕಾರ್ಜುನ ದೊಡಮನಿ
ನಿನ್ನೆ ರಾತ್ರಿ ಸಹೋದರಿಯನ್ನು ಆಕೆ ಮನೆಗೆ ಬಿಡಲು ಹೋಗಿದ್ದನು.

ಮಲ್ಲಿಕಾರ್ಜುನ ಅಕ್ಕ ಶಾಂತವ್ವಳ ಮನೆಯಿಂದ ವಾಪಸ್ ಆಗಮಿಸೋ ವೇಳೆ ಕೊಲೆಗೀಡಾಗಿದ್ದಾನೆಂದು ತಿಳಿದು ಬಂದಿದೆ.
ಸ್ಥಳಕ್ಕೆ ‌ಎಎಸ್ ಪಿ ಶಂಕರ ಮಾರಿಹಾಳ, ಆದರ್ಶನಗರ ಪಿಎಸೈ ಯತೀಶ್, ಶ್ವಾನದಳ ಭೇಟಿ ಪರಿಶೀಲನೆ ನಡೆಸಿದೆ.

ಆದರ್ಶ ನಗರ ಪೊಲೀಸ್ ಠಾಣಾ‌ ವ್ಯಾಪ್ತಿ ಘಟನೆ ನಡೆದಿದ್ದು
ಸ್ಥಳಗಳಲ್ಲಿ ಮೃತನ ಸಂಬಂಧಿಸಿಕರ ಆಕ್ರಂದನ ಮುಗಿಲು ಮುಟ್ಟಿದೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)

error: Content is protected !!