ಬೆಳಗಾವಿ

ಅಮೇರಿಕಾ ಕರೆಗೆ ಮೋಸ ಹೋದ ಟೀಚರ್‌, ಒಂದಲ್ಲ ಎರಡಲ್ಲ ಬರೋಬ್ಬರಿ 58.30 ಲಕ್ಷ ರೂ.ಮೋಸ, ವೆರಿ ಇಂಟ್ರೆಸ್ಟಿಂಗ್‌ ಕೇಸ್‌

ಸರಕಾರ ನ್ಯೂಸ್ ಬೆಳಗಾವಿ

ಪರಿಚಯವೇ ಇಲ್ಲದ ವಾಟ್ಸಪ್‌ ಫ್ರೆಂಡ್‌ ರಿಕ್ವೆಸ್ಟ್‌ ಮೂಲಕ ಪರಿಚಯವಾದ ವ್ಯಕ್ತಿಯ ಬಣ್ಣದ ಮಾತು ನಂಬಿ ಟೀಚರ್ ವೊಬ್ಬರು ಬರೋಬ್ಬರಿ 58.30 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಬಳಿಯ ಇಂಡಸ್‌ ಅಲಟಮ್‌ ಇಂಟರ್‌ ನ್ಯಾಶನಲ್‌ ಶಾಲೆಯ ಸ್ಟಾಪ್‌ ಕ್ವಾಟರ್ಸ್‌ನಲ್ಲಿ ವಾಸವಾಗಿರುವ ರೀನಾ ಫಿನೆ ರೋಲಿ ಎಂಬುವರು ಮೋಸಕ್ಕೆ ಒಳಗಾದ ಟೀಚರ್‌.

ರೀನಾಗೆ ವಾಟ್ಸಪ್‌ ಫ್ರೆಂಡ್‌ ರಿಕ್ವೆಸ್ಟ್‌ ಬಂದಿದ್ದು ಬಳಿಕ ಕರೆ ಮಾಡಿ ತಾನು ಮೂಲತಃ ಅಮೇರಿಕಾ ದೇಶದವನಿದ್ದು ದುಬೈಗೆ ಬಂದಿರುತ್ತೇನೆ. ನನ್ನ ಬ್ಯಾಂಕ್‌ ಖಾತೆಯಲ್ಲಿ 3.17 ಸಾವಿರ ಪೌಂಡ್‌ ಹಣ ಇದೆ. ನನ್ನ ಬ್ಯಾಂಕ್‌ ಖಾತೆಯಿಂದ ದುಬೈನಲ್ಲಿರುವ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ ಮಾಡಬೇಕಾಗಿದೆ. ಇಲ್ಲಿ ಇಂಟರ್‌ನೆಟ್‌ ವರ್ಕ್‌ ಮಾಡುತ್ತಿಲ್ಲ ಎಂದು ಹೇಳಿದ್ದು, ಅವನ ಬ್ಯಾಂಕ್‌ ಖಾತೆಯಿಂದ ಹಣ ವರ್ಗಾವಣೆ ಮಾಡಿದ್ದಾನೆ. ನಂತರ ಅವನು ನನ್ನ ಬ್ಯಾಂಕ್‌ ಖಾತೆ ಬ್ಲಾಕ್‌ ಆಗಿದೆ ಎರಡ ತಿಂಗಳು ಬ್ಲಾಕ್‌ ತೆಗೆಯಲು ಬರುವುದಿಲ್ಲ. ಅದಕ್ಕೆ ನೀವು ನನಗೆ ಸಹಾಯ ಮಾಡಬಹುದೇ? ದುಬೈನಿಂದ ಭಾರತಕ್ಕೆ ಬಂದು ನಿಮ್ಮ ಎಲ್ಲ ಹಣ ಕೊಟ್ಟು ಹೋಗುತ್ತೇನೆ ಎಂದಿದ್ದಾನೆ. ಇದನ್ನು ನಂಬಿ ರೀನಾ ಏಳು ಖಾತೆಗಳಿಗೆ ಒಟ್ಟು 58.30 ಲಕ್ಷ ರೂಪಾಯಿ ಇಂಟರ್ ನೆಟ್‌ ಬ್ಯಾಂಕಿಂಗ್‌ ಮುಖಾಂತರ ವರ್ಗಾವಣೆ ಮಾಡಿದ್ದಾರೆ. ಆ ಮೂಲಕ ಮೋಸಕ್ಕೆ ಬಲಿಯಾಗಿದ್ದಾರೆ.

ಈ ಬಗ್ಗೆ ಬೆಳಗಾವಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ರಾಜ್ಯದಲ್ಲಿ ಇಂಥ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ವ್ಯಾಪಕ ಜಾಗೃತಿ ಮೂಡಿಸಬೇಕಿದೆ.

 

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!