ಪ್ರವಾಸಿ ಟ್ಯಾಕ್ಸಿ ಖರೀದಿಗೆ ಸಹಾಯಧನ : ಅರ್ಜಿ ಆಹ್ವಾನ
ಸರಕಾರ್ ನ್ಯೂಸ್ ವಿಜಯಪುರ
ಪ್ರವಾಸೋದ್ಯಮ ಇಲಾಖೆ ವತಿಯಿಂದ ಪ್ರವಾಸಿ ಟ್ಯಾಕ್ಸಿ ಖರೀದಿಗೆ ಸಹಾಯಧನ ಒದಗಿಸುವ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ.
2013-14ನೇ ಸಾಲಿನಿಂದ 2017-18ನೇ ಸಾಲಿನಲ್ಲಿ ಹಿಂಬಾಕಿ ಉಳಿದ ಎಸ್.ಸಿ.ಪಿ-ಟಿ.ಎಸ್.ಪಿ, ಯೋಜನೆಯಡಿ ಪರಿಶಿಷ್ಟ ಜಾತಿಯ 12, ಪರಿಶಿಷ್ಟ ಪಂಗಡದ 5 ಸಾಮಾನ್ಯ ಯೋಜನೆಯಡಿ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದ 12 ಯುವಕ-ಯುವತಿಯರಿಗೆ ಸಹಾಯಧನ ಒದಗಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಪ್ರವಾಸಿ ಟ್ಯಾಕ್ಸಿ ಖರೀದಿಸಲು ತಗುಲುವ ಒಟ್ಟು ವೆಚ್ಚದಲ್ಲಿ ಗರಿಷ್ಠ ರೂ.2.00 ಲಕ್ಷಗಳ ಸಹಾಯಧನವನ್ನು ಇಲಾಖೆಯಿಂದ ನೀಡಲಾಗುವುದು ಹಾಗೂ ಶೇ.5 ರಷ್ಟನ್ನು ಅಭ್ಯರ್ಥಿಯು ಭರಿಸುವುದು ಹಾಗೂ ಉಳಿದ ಮೊತ್ತವನ್ನು ರಾಷ್ಟ್ರೀಕೃತ ವಾಣಿಜ್ಯ/ಸಹಕಾರಿ ಬ್ಯಾಂಕುಗಳ ಮೂಲಕ ಸಾಲವನ್ನು ಫಲಾನುಭವಿ ಪಡೆದುಕೊಳ್ಳಬೇಕು.
ಫಲಾನುಭವಿಗಳ ಆಯ್ಕೆಯಲ್ಲಿ ಅಭ್ಯರ್ಥಿಯ ವಯಸ್ಸು ಹಾಗೂ ಎಸ್.ಎಸ್.ಎಲ್.ಸಿ.ಯಲ್ಲಿ ಪಡೆದ ಫಲಿತಾಂಶದ ಶೇಕಡಾವಾರು ಅಂಕವನ್ನು ಏರಿಕೆಯಿಂದ ಇಳಿಕ ಕ್ರಮದಲ್ಲಿ (descending order )ಸಿದ್ದಪಡಿಸಿ ಜೇಷ್ಠತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
ನಿಗದಿತ ಅರ್ಜಿ ನಮೂನೆಯನ್ನು ಉಪನಿರ್ದೇಶಕರು ಪ್ರವಾಸೋದ್ಯಮ ಇಲಾಖೆ, ಬ್ಲಾಕ್ -1 ಪ್ರವಾಸಿ ಪ್ಲಾಜಾ,ಜಿಲ್ಲಾ ಕ್ರೀಡಾಂಗಣ ಎದುರುಗಡೆ ಇಂಡಿ ರಸ್ತೆ ವಿಜಯಪುರ ಕಚೇರಿಯಿಂದ ಪಡೆದು, ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸದರಿ ಕಚೇರಿಗೆ ಸಲ್ಲಿಸಬೇಕು ಅರ್ಜಿ ಸಲ್ಲಿಸಲು ದಿನಾಂಕ : 21-12-2022 ಕೊನೆಯ ದಿನವಾಗಿದ್ದು, ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08352-250359 ಸಂಖ್ಯೆಗೆ ಸಂಪರ್ಕಿಸುವಂತೆ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.