ಯಾದಗಿರಿ

ಕೃಷ್ಣಾ ನದಿ ಪಾತ್ರದಲ್ಲಿ ಅಕ್ರಮ ಮರಳು ದಂಧೆ, ಖಾಕಿ ದಾಳಿಗೆ ಹೆದರಿ ಕಾಲ್ಕಿತ್ತ ಕಿರಾತಕರು….!

ಸರಕಾರ ನ್ಯೂಸ್‌ ಸುರಪುರ

ಕೃಷ್ಣಾ ನದಿ ಪಾತ್ರದಲ್ಲಿ ಅಕ್ರಮವಾಗಿ ಮರಳು ದಂಧೆ ನಡೆಸುತ್ತಿದ್ದ ಕಿರಾತಕರ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಖಾಕಿ ಪಡೆಯನ್ನು ಕಂಡ ದಂಧೆಕೋರರು ಕಾಲ್ಕಿತ್ತಿದ್ದಾರೆ.

ಸುರಪುರದ ಬೇವಿನಾಳ ಕ್ರಾಸ್‌ ಬಳಿ ಚೌಡೇಶ್ವರಹಾಳ ಸೀಮಾಂತರದ ಕೃಷ್ಣಾ ನದಿಪಾತ್ರದಿಂದ ಸೋಮವಾರ (ಜ.23) ಮರಳು ಎತ್ತುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ಟ್ರ್ಯಾಕ್ಟರ್‌ ಬಳಸಲು ಅಕ್ರಮವಾಗಿ ಮರಳು ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಪಿಐ ಆನಂದ ವಾಗಮೋಡೆ ನೇತೃತ್ವದ ತಂಡ ದಾಳಿ ನಡೆಸಿದೆ.

ಈ ವೇಳೆ ದಂಧೆಕೋರರು ಪೊಲೀಸರನ್ನು ನೋಡಿ ಓಡಿ ಹೋಗಿದ್ದಾರೆ. ಸ್ಥಳದಲ್ಲಿದ್ದ ಸ್ವರಾಜ್‌ ಕಂಪನಿಯ ಟ್ರ್ಯಾಕ್ಟರ್‌ ಹಾಗೂ ಮರಳು ವಶಕ್ಕೆ ಪಡೆದ ಪೊಲೀಸರು ಟ್ರ್ಯಾಕ್ಟರ್‌ ಚಾಲಕ ಮತ್ತು ಮಾಲೀಕನ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಸಿಬ್ಬಂದಿಯಾದ ಮಹಿಬೂಬಅಲೀ, ಹೊನ್ನಪ್ಪ, ಹುಸೇನಿ ಮತ್ತಿತರರು ದಾಳಿಯಲ್ಲಿದ್ದರು. ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

 

error: Content is protected !!