ಬಳ್ಳಾರಿ

ಲಂಡನ್‌ ಗಿಫ್ಟ್‌ ಆಸೆಗೆ ಎಂಟು ಲಕ್ಷ ಕಳೆದುಕೊಂಡ ಯುವತಿ, ಇಲ್ಲಿದೆ ಇಂಟ್ರೆಸ್ಟಿಂಗ್‌ ಸ್ಟೋರಿ….!

ಸರಕಾರ್‌ ನ್ಯೂಸ್‌ ಬಳ್ಳಾರಿ

ಆನ್‌ಲೈನ್‌ ಮೂಲಕ ಹಣ ಯಾಮಾರಿಸುವವರ ಪ್ರಕರಣ  ಹೆಚ್ಚುತ್ತಲೇ ಇದ್ದರು ಮರುಳಾಗುವವರ ಸಂಖ್ಯೆಯೇನು ಕಡಿಮೆಯಾಗಿಲ್ಲ !

ಹೌದು, ಅಪರಚಿತ ವ್ಯಕ್ತಿಗಳನ್ನು ನಂಬಿ ಲಕ್ಷ ಲಕ್ಷ ರೂಪಾಯಿ ಕಳೆದುಕೊಂಡ ಪ್ರಕರಣಗಳನ್ನು ದಿನಬೆಳಗಾದರೆ ಕೇಳುತ್ತಲೇ ಇರುತ್ತೇವೆ. ಅಂಥದ್ದೇ ಅಪರೂಪದ, ಅತ್ಯಂತ ಕುತೂಹಲದ ಪ್ರಕರಣವೊಂದು ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ.

ಯುವತಿಯೋರ್ವಳು ಅಪರಿಚಿತ ವ್ಯಕ್ತಿಯ ಗಿಫ್ಟ್‌ ನಂಬಿ ಒಟ್ಟು 8.20 ಲಕ್ಷ ರೂಪಾಯಿ ಕಳೆದುಕೊಂಡಿದ್ದಾಳೆ. ಬಳ್ಳಾರಿಯ ವಿದ್ಯಾನಗರದ ಕಲ್ಯಾಣ ಕಾಲನಿಯ ನಿವಾಸಿ ಸುನೀತಾ ಎ ಎಂಬುವವರು ಹಣ ಕಳೆದುಕೊಂಡ ಯುವತಿ.

ವೆರಿ ಇಂಟ್ರೆಸ್ಟಿಂಗ್‌ ಕೇಸ್‌:

ನ. 22 ರಂದು ಸುನೀತಾ ಮೊಬೈಲ್‌ಗೆ ಅಪರಚಿತ ವ್ಯಕ್ತಿಯಿಂದ ವಾಟ್ಸಪ್‌ ಮೆಸೇಜ್‌ ಬಂದಿದ್ದು, ಅದರಲ್ಲಿ “ನನ್ನ ತಾಯಿಗೆ ನೀವು ಬಹಳ ಇಷ್ಟವಾಗಿದ್ದೀರಿ, ಅವರು ನಿಮಗಾಗಿ ಕೆಲವು ಗಿಫ್ಟ್‌ಗಳನ್ನು ಖರೀಸಿದ್ದು ಅವುಗಳನ್ನು ನಿಮಗೆ ಕಳುಹಿಸಿದ್ದೇನೆ. ಡೆಲ್ಲಿ ಏರ್‌ಪೋರ್ಟ್‌ನಿಂದ ನಿಮಗೆ ಕಾಲ್‌ ಬರುತ್ತೆ ಅಂತ ಹೇಳಿದ್ದಾನೆʼ ಬಳಿಕ ರಾಧಿಕಾ ಎಂಬುವವರು ಫೋನ್‌ ಮಾಡಿ ಲಂಡನ್‌ನಿಂದ ನಿಮಗೆ ಪಾರ್ಸಲ್‌ ಬಂದಿದ್ದು ಅದಕ್ಕೆ ಸರ್ವಿಸ್‌ ಟ್ಯಾಕ್ಸ್‌, ಗೂಡ್ಸ್‌ ಟ್ಯಾಕ್ಸ್‌ ಮತ್ತು ಪೌಂಡ್ಸ್‌ ಪರಿವರ್ತನೆಗಾಗಿ ಹಣ ಹಾಕಿ ಅಂತ ಹೇಳಿದ್ದಾರೆ. ಇದನ್ನು ನಂಬಿದ ಸವಿತಾ ತನ್ನ ದೊಡ್ಡಮ್ಮಳ ಎಸ್‌ಬಿಐ ಖಾತ್ರೆಯಿಂದ ಹಂತ ಹಂತವಾಗಿ ಒಟ್ಟು 8.20 ಲಕ್ಷ ರೂಪಾಯಿ ಆರ್‌ಟಿಜಿಎಸ್‌ ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ.

ಬಂತಾ ಗಿಫ್ಟ್‌?

ನವೆಂಬರ್‌ 22 ರಿಂದ 29 ರವರೆಗೆ ಅಂದರೆ ಒಂದೇ ವಾರದಲ್ಲಿ ಬರೋಬ್ಬರಿ 8.20 ಲಕ್ಷ ರೂಪಾಯಿ ಹಣ ಹಾಕಿರುವ ಸುನೀತಾ ಗಿಫ್ಟ್‌ಗಾಗಿ ಕಾದು ಕಾದು ಸುಸ್ತಾಗಿದ್ದಾರೆ. ಆದರೆ, ಗಿಫ್ಟ್‌ ಕಳುಹಿಸದೇ ಹಣವೂ ವಾಪಸ್‌ ಕೊಡದೇ ಮೋಸ ಮಾಡಿದ್ದು ಅರಿವಾಗುತ್ತಿದ್ದಂತೆ ಡಿ. 22 ರಂದು ಬಳ್ಳಾರಿಯ ಸೈಬರ್‌ ಠಾಣೆಗೆ ಸುನೀತಾ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್‌ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!