ಎಸ್ ಟಿ ಪ್ರಮಾಣ ಪತ್ರ ಹಂಚಿಕೆ, ಕೈ-ಕಮಲ ನಾಯಕರ ಕಳಕಳಿ, ಇಂಡಿಯಲ್ಲಿ ತಳವಾರರಿಗೆ ಸಿಕ್ತು ಸರ್ಟಿಫಿಕೇಟ್!
ಸರಕಾರ್ ನ್ಯೂಸ್ ಇಂಡಿ
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆದೇಶದಂತೆ ತಳವಾರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಿದ್ದು, ಆ ಪ್ರಕಾರ ಇಂಡಿಯಲ್ಲಿ ಕೈ- ಕಮಲ ನಾಯಕರು ಪ್ರಮಾಣ ಪತ್ರ ವಿತರಿಸಿದರು.
ರಾಜ್ಯಾದ್ಯಂತ ತಳವಾರ ಸಮಾಜಕ್ಕೆ ಎಸ್ ಟಿ ಪ್ರಮಾಣ ಪತ್ರ ನೀಡಲಾಗುತ್ತಿದ್ದರೂ ಇಂಡಿಯಲ್ಲಿ ವಿಳಂಬವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಶಾಸಕ ಯಶವಂತರಾಯಗೌಡ ಪಾಟೀಲ ಹಾಗೂ ಬಿಜೆಪಿ ನಾಯಕ ದಯಾಸಾಗರ ಪಾಟೀಲ ಮಂಗಳವಾರ ತಹಸೀಲ್ದಾರ್ ಮೂಲಕ ಎಸ್ ಟಿ ಪ್ರಮಾಣ ಪತ್ರ ಸಿಗುವಂತೆ ಮಾಡಿದರು.
ಆ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆದೇಶ ಪಾಲನೆಗೆ ಮುನ್ನುಡಿ ಬರೆಯಲಾಯಿತು. ಪ್ರಮಾಣ ಪತ್ರ ಪಡೆದ ಫಲಾನುಭವಿಗಳು ಶಾಸಕ ಯಶವಂತರಾಯಗೌಡ ಪಾಟೀಲ ಹಾಗೂ ದಯಾಸಾಗರ ಪಾಟೀಲ ಗೆ ಅಭಿನಂದನೆ ಸಲ್ಲಿಸಿದರು. ತಹಸೀಲ್ದಾರ್ ಗೆ ಶಾಲು ಹೊದಿಸಿ, ಸಿಹಿ ತಿನ್ನಿಸಿ ಸಂಭ್ರಮಿಸಿದರು.