ನಾನ್ ವೆಜ್ ಅಂಗಡಿಗೆ ಕನ್ನ, ಸಿಸಿ ಟಿವಿಯಲ್ಲಿ ದೃಶ್ಯ ಸೆರೆ
ಸರಕಾರ್ ನ್ಯೂಸ್ ವಿಜಯಪುರ
ನಾನ್ ವೆಜ್ ಅಂಗಡಿಗೆ ಕನ್ನ ಹಾಕಿದ ಖದೀಮನೋರ್ವ ನಗದು ಹಾಗೂ ಪಕ್ಕದ ಅಂಗಡಿಯ ಸಾಮಗ್ರಿಗಳನ್ನು ಕಳುವು ಮಾಡಿಕೊಂಡು ಹೋಗಿದ್ದಾನೆ.
ವಿಜಯಪುರದ ಕೇಂದ್ರ ಬಸ್ ನಿಲ್ದಾಣ ಬಳಿ ಭಾನುವಾರ ಈ ಘಟನೆ ನಡೆದಿದೆ. ಈರ್ಫಾನ್ ಮೋಮಿನ ಎಂಬುವರ ರೆಡ್ ಚಿಲ್ಲಿ ಎಂಬ ಅಂಗಡಿಯಲ್ಲಿ ಕಳ್ಳತನ ನಡೆದಿದೆ.
ಅಂಗಡಿಯ ಹಿಂದಿನ ಗೋಡೆ ಒಡೆದು ಒಳ ನುಗ್ಗಿದ ಕಳ್ಳನೋರ್ವ ಎರಡು ಅಂಗಡಿಯಲ್ಲಿ ಸಾವಿರಾರು ಮೌಲ್ಯದ ವಸ್ತುಗಳ ಹಾಗೂ ನಗದು ದೋಚಿಕೊಂಡು ಪರಾರಿಯಾಗಿದ್ದಾನೆ. 30 ಸಾವಿರ ನಗದು ಹಾಗೂ ಜಮೀಲ್ ಹರಿಯಾಳ್‌ರ ಸಹಾರ ಪಾನ್‌ಶಾಪ್ ಅಂಗಡಿಯನಲ್ಲಿ ಸಿಗರೇಟ್, ಏರ್ ಬರ್ಡ್ ಸೇರಿದಂತೆ ವಿವಿಧ ವಸ್ತುಗಳನ್ನು ಕಳ್ಳ ದೋಚಿ ಪರಾರಿಯಾಗಿದ್ದಾನೆ. ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)