ಎತ್ತಿನ ಗಾಡಿಗೆ ಮದ್ಯ ತುಂಬಿದ ಪ್ಯಾಜೋ ಡಿಕ್ಕಿ, ರಸ್ತೆ ಪಾಲಾದ ಮದ್ಯ ಎಷ್ಟು ಗೊತ್ತಾ?
ಸರಕಾರ್ ನ್ಯೂಸ್ ಕೊಲ್ಹಾರ
ಮದ್ಯ ಸಾಗಣೆ ಮಾಡುವ ಪ್ಯಾಜೋ ವಾಹನ ಎತ್ತಿನ ಗಾಡಿಗೆ ಡಿಕ್ಕಿ ಹೊಡೆದ ಪರಿಣಾಮ ಅಪಾರ ಮದ್ಯ ರಸ್ತೆ ಪಾಲಾಗಿದೆ.
ಜಿಲ್ಲೆಯ ಕೊಲ್ಹಾರ ತಾಲೂಕಿನ ಮುಳವಾಡ ಕ್ರಾಸ್ ಬಳಿ ಶುಕ್ರವಾರ ಈ ಘಟನೆ ನಡೆದಿದೆ. ಶ್ರೀಶೈಲ ಕಳಸಗೊಂಡ ಎಂಬುವರ ಎತ್ತಿನ ಗಾಡಿಗೆ ಮದ್ಯ ತುಂಬಿ ಪ್ಯಾಜೋ ವಾಹನ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಮದ್ಯದ ಬಾಕ್ಸ್‌ಗಳು ರಸ್ತೆ ಮೇಲೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಅಪಾರ ಹಾನಿಯಾಗಿದೆ.
ಕೊಲ್ಹಾರದ ಲಕ್ಕಿ ಬಾರ್‌ಗೆ ಮದ್ಯ ಸಾಗಿಸುತ್ತಿದ್ದ ಪ್ಯಾಜೋ ಎನ್ನಲಾಗಿದ್ದು ಈ ವಾಹನದಲ್ಲಿ 2.15 ಲಕ್ಷ ರೂ.ಮೌಲ್ಯದ ಮದ್ಯ ಸಾಗಿಸಲಾಗುತ್ತಿದ್ದು. ಆ ಪೈಕಿ 70 ಸಾವಿರ ರೂ.ಮೌಲ್ಯದ ಮದ್ಯ ಹಾನಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಮನಗೂಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.