ಪಾಲಿಕೆ ವ್ಯಾಪ್ತಿಯ ಮಳೆಹಾನಿ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಭೇಟಿ,ಪರಿಶೀಲನೆ
ವಿಜಯಪುರ: ಮಳೆ ಹಾನಿ ಪ್ರದೇಶಗಳಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಅವರು ಬುಧವಾರ ಭೇಟಿ ನೀಡಿ ಪರಿಶೀಲಿಸಿದರು. ವಿಜಯಪುರ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸಂಚಾರ ನಡೆಸಿ, ವಾರ್ಡ್ 6ರ ಕೆ.ಸಿ.ನಗರ, ಡಿಸಿಸಿ ಬ್ಯಾಂಕ್ ಹತ್ತಿರ ಬಬಲೇಶ್ವರ ನಾಕಾ ಹತ್ತಿರದ ಬಾಗವಾನ ಕಾಲೋನಿ, ಪ್ರೇಮ ನಗರ, ನವಭಾಗ ರಸ್ತೆಯ ಕೋಟೆ ಗೋಡೆ ಹತ್ತಿರ, ಜುಮ್ಮಾ ಮಸಜೀದ್, ವಾರ್ಡ್ ನಂ14 ರ ಅಪ್ಸರಾ ಥೇಟರ್ ಹತ್ತಿರ ಸಂಚರಿಸಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಜಿಲ್ಲಾಧಿಕಾರಿ ಟಿ.ಭೂಬಾಲನ್,ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಾಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆೆ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ,ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಸಿ.ಬಿ.ಚಿಕ್ಕಲಕಿ ಸೇರಿದಂತೆ ಅಧಿಕಾರಿ ಉಪಸ್ಥಿತರಿದ್ದರು.