ಜೆಡಿಎಸ್ ಜನತಾ ಜಲಧಾರೆ ಸಂಕಲ್ಪ ಯಾತ್ರೆ, ಆಲಮಟ್ಟಿಯಲ್ಲಿ ಕುಮಾರಸ್ವಾಮಿ ವಿಶೇಷ ಪೂಜೆ
ವಿಜಯಪುರ: ಮುಂಬರುವ ವಿಧಾನ ಸಭೆ ಚುನಾವಣೆ ಹಿನ್ನೆಲೆ ಜೆಡಿಎಸ್ ನಿಂದ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಜನತಾ ಜಲಧಾರೆ ಸಂಕಲ್ಪ ಯಾತ್ರೆಗೆ ಶನಿವಾರ ಆಲಮಟ್ಟಿಯಲ್ಲಿ ಚಾಲನೆ ನೀಡಲಾಯಿತು.
ಕೃಷ್ಣಾ ನದಿಯಲ್ಲಿ ಗಂಗಾಪೂಜೆ ಸಲ್ಲಿಸಿ ಕಲಶದಲ್ಲಿ ನೀರು ಸಂಗ್ರಹಿಸಲಾಯಿತು.
ಬಳಿಕ ನೂರಾರು ಕುಂಭಗಳೊಂದಿಗೆ ಯಾತ್ರೆಗೆ ಚಾಲನೆ ನೀಡಲಾಯಿತು. ಇದಕ್ಕೂ ಮುನ್ನವೇ ಯಲಗೂರಿನ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನೂರಾರು ಸುಮಂಗಲಿಯರು ಕುಂಭ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡರು. ಗೊಂಬೆ ಕುಣಿತ, ಡೊಳ್ಳಿನ ಕುಣಿತ, ವಿವಿಧ ವಾದ್ಯಗಳೊಂದಿಗೆ ಭವ್ಯ ಮೆರವಣಿಗೆ ನಡೆಸಲಾಯಿತು.
ನಾಗಠಾಣ ಶಾಸಕ ದೇವಾನಂದ ಚೌವಾಣ್, ಸುನಿತಾ ಚವಾಣ್, ಹಾಗೂ ಇತರೆ ಮುಖಂಡರು ಪೂಜೆಯಲ್ಲಿ ಭಾಗಿಯಾಗಿದ್ದರು.