ಪಾಲಿಕೆ ಚುನಾವಣೆ ಅಖಾಡಕ್ಕಿಳಿದ ಶಾಸಕ ದ್ವಯರು, ರಂಗೇರಿದ ಜೆಡಿಎಸ್ ಬಿಜೆಪಿ ಪ್ರಚಾರ
ಸರಕಾರ್ ನ್ಯೂಸ್ ವಿಜಯಪುರ
ತೀವ್ರ ಕುತೂಹಲ ಕೆರಳಿಸಿರುವ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯ ಹಿನ್ನೆಲೆ ಜೆಡಿಎಸ್ ಶಾಸಕ ದೇವಾನಂದ ಚವಾಣ್ ಹಾಗೂ ಬಸನಗೌಡ ಪಾಟೀಲ ಯತ್ನಾಳ ಪ್ರಚಾರದ ಅಖಾಡಕ್ಕೆಇಳಿದಿದ್ದಾರೆ.
ಶನಿವಾರ ನಗರದ ವಿವಿಧ ವಾರ್ಡ್‌ಗಳಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪಕ್ಷದ ಅಭ್ಯರ್ಥಿ ಪ್ರ ಪ್ರಚಾರ ನಡೆಸಿದರು. ಇತ್ತ ನಾಗಠಾಣ ವಿಧಾನ ಸಭೆ ಕ್ಷೇತ್ರದ ವಾರ್ಡ್‌ಗಳಲ್ಲಿ ಶಾಸಕ ಡಾ.ದೇವಾನಂದ ಚವಾಣ್ ಮತಯಾಚಿಸಿದರು.
ವಾರ್ಡ್ ನಂ.12ಕ್ಕೆ ಜೆಡಿಎಸ್‌ನಿಂದ ಸ್ಪರ್ಧಿಸಿರುವ ಸಂಗೀತಾ ಪ್ರಕಾಶ್ ಚವಾಣ್ ಪರವಾಗಿ ಶಾಸಕ ದೇವಾನಂದ ಪ್ರಚಾರ ನಡೆಸಿದರು. ಕಾರ್ಗಿಲ್ ನಗರ, ಕಾಳಿಕಾ ನಗರ, ಲಕ್ಷ್ಮಿ ನಗರ, ಐಶ್ವರ್ಯ ನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಪ್ರಚಾರ ಕೈಗೊಂಡರು. ಪಕ್ಷದ ಕಾರ್ಯಕರ್ತರು, ಮುಖಂಡರು, ಯುವ ಮುಖಂಡರೊಂದಿಗೆ ಮತಯಾಚನೆ ಮಾಡಿದರು. ಇದರಿಂದ ಅಭ್ಯರ್ಥಿಗಳಲ್ಲಿ ಗೆಲುವಿನ ಹುಮ್ಮಸ್ಸು ಹೆಚ್ಚಾಯಿತು.