ನಮ್ಮ ವಿಜಯಪುರ

ಚಲಿಸುತ್ತಿದ್ದ ರೈಲಿನ ಬೋಗಿ ಕಟ್, ತಪ್ಪಿದ ಅನಾಹುತ

ಸರಕಾರ್‌ ನ್ಯೂಸ್ ವಿಜಯಪುರ

ಚಲಿಸುತ್ತಿದ್ದ ಗೂಡ್ಸ್ ರೈಲಿನ ಬೋಗಿಗಳ ನಡುವಿನ ಸಂಪರ್ಕ ಕಡಿತಗೊಂಡ ಪರಿಣಾಮ ಆರು ಬೋಗಿಗಳು ಉರುಳಿಬಿದ್ದಿವೆ.
ಜಿಲ್ಲೆಯ ಕೊಲ್ಹಾರ ಪಟ್ಟಣದ ಮುಳವಾಡ ರೈಲು ‌ನಿಲ್ದಾಣ ಬಳಿ ಈ ಘಟನೆ ನಡೆದಿದೆ.

ಸೊಲ್ಲಾಪುರದಿಂದ ವಿಜಯಪುರ ಮಾರ್ಗವಾಗಿ ಹುಬ್ಬಳ್ಳಿಗೆ ಹೊರಟಿದ್ದ ರೈಲಿನ ಸಂಪರ್ಕ ಕಟ್ ಆಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ವಿಜಯಪುರ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅವಘಡದಿಂದಾಗಿ ಇಂದು ಈ ಮಾರ್ಗವಾಗಿ ಸಂಚರಿಸಲಿದ್ದ ಆರು ರೈಲುಗಳ ಸಂಚಾರ ಸ್ಥಗಿತ ಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!