ರಾಜ್ಯ

ಮೋದಿ ದುರ್ಬೀನು ಹಾಕಿ ನೋಡಿದರೂ ಕಾಣದ ಹುಲಿ, ಮಾರುತ್ತಾರೆಂಬ ಭಯಕ್ಕೆ ಓಡಿ ಹೋಗಿರಬಹುದು ಎಂದ ಸಿದ್ದು….! ಅಯ್ಯೋ ಪಾಪ…..!!

ಸರಕಾರ ನ್ಯೂಸ್ ಬೆಂಗಳೂರು

ವಿಧಾನ ಸಭೆ ಸಾರ್ವತ್ರಿಕ ಚುನಾವಣೆ ಹೊತ್ತಿನಲ್ಲಿ ಬಂಡಿಪುರ ಅಭಿಯಾರಣ್ಯದಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಸಫಾರಿ ನಡೆಸಿರುವುದು ಇಡೀ ದೇಶವೇ ಕುತೂಹಲದಿಂದ ಗಮನಿಸಿದೆ. ಅದೇ ರೀತಿ ಕಾಂಗ್ರೆಸ್ ಪ್ರತಿಕ್ರಿಯೆ ಕೂಡ ಕುತೂಹಲ ಮೂಡಿಸಿದೆ.

ಅತ್ತ ಪ್ರಧಾನಿ ನರೇಂದ್ರ ಮೋದಿ ಸಫಾರಿ ನಡೆಸುತ್ತಿದ್ದ ವೇಳೆ ಹುಲಿರಾಯ ಕಾಣದ ಬಗ್ಗೆ ಮಾಹಿತಿ ಅರಿತ ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಇತ್ತ ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದು, ‘ಹಿಡಿದು ಮಾರಿ ಬಿಡುತ್ತಾರೆಂಬ ಭಯಕ್ಕೆ ಯಾವ ಗುಹೆಯೊಳಗೆ ಅಡಗಿ ಕುಳಿತಿದೆಯೋ….ಅಯ್ಯೋ ಪಾಪ ಇನ್ನು ಕೆಲವೇ ದಿನಗಳಲ್ಲಿ ಬಂಡಿಪುರ ಉಳಿಸಿ ಅಭಿಯಾನವನ್ನು ಕನ್ನಡಿಗರು ಶುರು ಮಾಡುವಂತೆ ಆಗದಿರಲಿ ಅದೇ ನೀವು ಕರುನಾಡಿಗೆ ಮಾಡುವ ದೊಡ್ಡ ಉಪಕಾರ’ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನೊಂದೆಡೆ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಘಟಕ ಕೂಡ ಟ್ವೀಟ್ ಮಾಡಿದ್ದು, ‘70 ವರ್ಷದಿಂದ ಕಾಂಗ್ರೆಸ್ ಏನು ಮಾಡಿದೆ’ ಎನ್ನುವ ನರೇಂದ್ರ ಮೋದಿ ಅವರೆ, ಇಂದು ನೀವು ಸಫಾರಿ ಮೋಜು ಮಾಡುತ್ತಿರುವ ಬಂಡೀಪುರ ಹುಲಿ ಸಂರಕ್ಷಣಾ ಯೋಜನೆಯನ್ನು 1973ರಲ್ಲಿ ಜಾರಿಗೊಳಿಸಿದ್ದು ಕಾಂಗ್ರೆಸ್ ಸರ್ಕಾರವೇ. ಅದರ ಪರಿಣಾಮವೇ ಇಂದು ಹುಲಿಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ ಎಂದಿದ್ದು ಕೊನೆಯಲ್ಲಿ ‘ತಮ್ಮಲ್ಲಿ ವಿಶೇಷ ಮನವಿ-ಬಂಡಿಪುರವನ್ನು ಅದಾನಿಗೆ ಮಾಡಬೇಡಿ !’ ಎಂದಿದೆ.

ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಫಾರಿಯನ್ನು ಎಂಜಾಯ್ ಮಾಡಿದರೆ ಇತ್ತ ಕಾಂಗ್ರೆಸ್ ಟೀಕೆಯನ್ನು ನೆಟ್ಟಿಗರು ಎಂಜಾಯ್ ಮಾಡುವಂತಾಯಿತು.

error: Content is protected !!