ವಿಜಯಪುರ

ಬಸವನಾಡಿನಲ್ಲಿ ಇದೆಂಥ ವಿಕೃತಿ? ಬಾಲಕನನ್ನು ಬೆತ್ತಲೆಗೊಳಿಸಿ, ವಿದ್ಯುತ್ ಕಂಬಕ್ಕೆ ಕಟ್ಟಿ, ಆಯಿಲ್‌ ಚೆಲ್ಲಿ ಥಳಿತ…..ಅಬ್ಬಬ್ಬಾ ಏನಿದು ಅಮಾನವೀಯ….!

ವಿಜಯಪುರ: ಬಾಲಕನನ್ನು ಬೆತ್ತಲೆಗೊಳಿಸಿ, ವಿದ್ಯುತ್ ಕಂಬಕ್ಕೆ ಕಟ್ಟಿ, ಮೈಮೇಲೆ ಆಯಿಲ್‌ ಚೆಲ್ಲಿ ಥಳಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಕತ್‌ ವೈರಲ್‌ ಆಗುತ್ತಿದೆ.

13 ವರ್ಷದ ಬಾಲಕನಿಗೆ ಬೆತ್ತಲೆ ಮಾಡಿ ವಿದ್ಯುತ್‌ ಕಂಬಕ್ಕೆ ಕಟ್ಟಿ ಬಾಯಿಗೆ ಮತ್ತು ಗುಪ್ತಾಂಗಕ್ಕೆ ಆಯಿಲ್‌ ಚೆಲ್ಲುವ ಪ್ರಕರಣ ಬೆಚ್ಚಿ ಬೀಳಿಸುತ್ತಿದೆ. ಅಂದ ಹಾಗೆ ಇಂದು ನಡೆದದ್ದು ಬೇರೆಲ್ಲೂ ಅಲ್ಲ, ದಯವೇ ಧರ್ಮದ ಮೂಲ ಎಂದಿರುವ ಅಣ್ಣ ಬಸವಣ್ಣನ ನಾಡಿನಲ್ಲಿ.

ಹೌದು, ಬಸವನಬಾಗೇವಾಡಿ ತಾಲೂಕಿನ ವಡವಡಗಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

ಸ್ಥಳೀಯ ನಿವಾಸಿ ಮಲಕಮ್ಮ ಹಿರೇಕುರುಬ ಎಂಬುವರ 13 ವರ್ಷದ ಪುತ್ರ ಶಿವಾನಂದ ಚಿತ್ರಹಿಂಸೆಗೆ ಗುರಿಯಾಗಿದ್ದಾನೆ. ಅದೇ ಗ್ರಾಮದ ಹಣಮಂತ ಮಡಿಕೇಶ್ವರ ಎಂಬಾತ ಚಿತ್ರಹಿಂಸೆ ನೀಡಿದ್ದು ಆತನ ಮೇಲೆ ದೂರು ದಾಖಲಿಸಿದ್ದಾಗಿ ಮಲಕಮ್ಮ ತಿಳಿಸಿದ್ದಾರೆ.

ನಾಲ್ಕೈದು ದಿನಗಳ ಹಿಂದೆಯೇ ಈ ಘಟನೆ ನಡೆದಿದ್ದು ಇದೀಗ ಅದರ ವಿಡಿಯೋ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅವಾಚ್ಯ ಪದಗಳಿಂದ ನಿಂದಿಸಿದ್ದಾನೆಂದು ಹಣಂತರಾಯ ಮಡಿಕೇಶ್ವರ ಹಾಗೂ ಇವರ ಪುತ್ರ ವಿರೇಶ ಮನೆಗೆ ಬಂದು ಮಲಕಮ್ಮಗೆ ತಿಳಿಸಿದ್ದಾರೆ. ಈ ವೇಳೆ ಮಲಕಮ್ಮ ಮಗ ಶಿವಾನಂದ ಮಾಡಿದ್ದು ತಪ್ಪು ಅದೇ ಕಾರಣಕ್ಕೆ ಆತನನ್ನು ಬೈದು, ಬಡಿದು ಬುದ್ದಿ ಹೇಳಿದ್ದೇನೆ. ಬೇಕಾದರೆ ತಾವೂ ಸ್ವಲ್ಪ ಬುದ್ದಿ ಹೇಳಿ ಎಂದಿದ್ದಾರೆ. ಕೂಡಲೇ ಶಿವಾನಂದನನ್ನು ಕರೆದುಕೊಂಡು ಹೋದ ಹಣಮಂತರಾಯ ಆತನನ್ನು ಬೆತ್ತಲೆಗೊಳಿಸಿ, ವಿದ್ಯುತ್ ಕಂಬಕ್ಕೆ ಕಟ್ಟಿ, ಆಯಿಲ್ ಚೆಲ್ಲಿದ್ದಾರೆ. ಬಾಯಲ್ಲಿ ಆಯಿಲ್ ಸಿಡಿಸಿದ್ದಾರೆಂದು ಮಲಕಮ್ಮ ಆರೋಪಿಸಿದ್ದಾರೆ.

ಈ ದೃಶ್ಯ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು, ಬಾಲಕನ್ನು ಥಳಿಸಿದ ವ್ಯಕ್ತಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಮಾನವೀಯ ಮೌಲ್ಯಗಳನ್ನು ಸಾರಿದ ಬಸವಣ್ಣನ ನೆಲದಲ್ಲೇ ಇಂಥ ಘಟನೆ ನಡೆದಿರುವುದು ಅಸಹನೀಯ ಎಂದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ.

error: Content is protected !!