ಯುಟ್ಯೂಬ್ ವಿಡಿಯೋ ಲೈಕ್ ಮಾಡಿದರೆ ಹಣ ಕೊಡುವ ಆಮಿಷ, ಐದು ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ವ್ಯಾಪಾರಿ….ಇಲ್ಲಿದೆ ಇಂಟ್ರೆಸ್ಟಿಂಗ್ ಕೇಸ್
ಸರಕಾರ ನ್ಯೂಸ್ ಬೆಳಗಾವಿ
ಟೆಲಿಗ್ರಾಮ್ ಗ್ರುಪ್‌ಗೆ ಸೇರ್ಪಡೆಯಾಗಿ ಯುಟ್ಯೂಬ್‌ಲ್ಲಿ ವಿಡಿಯೋ ಲೈಕ್ ಮಾಡಿದರೆ ಪ್ರತಿ ಲೈಕ್‌ಗೆ 50 ರೂಪಾಯಿ ಕೊಡುತ್ತೇವೆ, ಟಾಸ್ಕ್ ಪೂರ್ತಿಗೊಳಿಸಿದರೆ ನಿಮಗೆ ಲಾಭ ಕೊಡುತ್ತೇವೆ ಎಂದು ನಂಬಿಸಿ ಹಂತ ಹಂತವಾಗಿ 5.67 ಲಕ್ಷ ರೂಪಾಯಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಬೆಳಗಾವಿ ಟಿಳಕವಾಡಿಯ ನಿವಾಸಿ ಕ್ಯಾವಿನ್ ರೋಯಿಸ್ ರಾವ್ (28) ಮೋಸಕ್ಕೊಳಗಾದ ಯುವಕ. ಹೋಟೆಲ್ ವ್ಯಾಪಾರ ಮಾಡಿಕೊಂಡಿರುವ ಕ್ಯಾವಿನ್ ಮೊಬೈಲ್‌ಗೆ ಮೆಸೇಜ್ ಬಂದಿದ್ದು, ಟೆಲಿಗ್ರಾಮ್ ಗ್ರುಪ್‌ಗೆ ಸೇರ್ಪಡೆಯಾಗಿ ಯುಟ್ಯೂಬ್‌ಲ್ಲಿ ವಿಡಿಯೋ ಲೈಕ್ ಮಾಡಿದರೆ ಪ್ರತಿ ಲೈಕ್‌ಗೆ 50 ರೂಪಾಯಿ ಕೊಡುತ್ತೇವೆ, ಟಾಸ್ಕ್ ಪೂರ್ತಿಗೊಳಿಸಿದರೆ ನಿಮಗೆ ಲಾಭ ಕೊಡುತ್ತೇವೆ. ಅದಕ್ಕೆ ಪ್ರಿಪೆಡ್ ಟಾಸ್ಕ್ ಸಲುವಾಗಿ 1000 ರೂಪಾಯಿ ಭರಣಾ ಮಾಡಿದರೆ 1450 ರೂಪಾಯಿ ನೀಡುತ್ತೇವೆಂದು ನಂಬಿಸಿ ಬಳಿಕ ಹಂತ ಹಂತವಾಗಿ 5.67 ಲಕ್ಷ ರೂಪಾಯಿ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡು ಲಾಭಾಂಶ ಮರಳಿ ನೀಡದೆ ಮೋಸ ಮಾಡಿದ್ದಾರೆ.
ಇದೀಗ ಅಂದರೆ 2023 ಏಪ್ರೀಲ್ 7ರಂದು ಕ್ಯಾವಿನ್ ರೋಯಿಸ್ ರಾವ್ ಬೆಳಗಾವಿ ನಗರದ ಸಿಟಿ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.