ಬೆಂಗಳೂರು

ಡಾಟಾ ಎಂಟ್ರಿ ಆಪ್‌ರೇಟರ್‌ಗಳಿಗಿಲ್ಲ ಸೇವಾಭದ್ರತೆ, ಹೊರಗುತ್ತಿಗೆಯೇ ಆಧಾರ, ಗಮನ ಹರಿಸುವುದೇ ಸರ್ಕಾರ?

ಸರಕಾರ್‌ ನ್ಯೂಸ್‌ ಬೆಂಗಳೂರ

ನಾಗರಿಕರಿಗೆ ಒಂದೇ ಸೂರಿನಡಿ ಸರ್ಕಾರಿ ಸೇವಾ ಸೌಲಭ್ಯ ಒದಗಿಸುವ ಉದ್ದೇಶದಿಂದ ಸರ್ಕಾರವೇನೋ ಅಟಲ್‌ಜಿ ಜನಸ್ನೇಹಿ ಕೇಂದ್ರಗಳನ್ನು ಸ್ಥಾಪಿಸಿದೆ. ಆದರೆ, ಅಲ್ಲಿರುವ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಸೇವಾ ಭದ್ರತೆಯೇ ಇಲ್ಲದಂತಾಗಿದ್ದು ಕಷ್ಟದ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.

ರಾಜ್ಯದ ಎಲ್ಲ ಹೋಬಳಿ ಮಟ್ಟದಲ್ಲಿ ಒಟ್ಟು 770 ನಾಡಕಚೇರಿಗಳು, 122 ಫ್ರಂಟ್‌ ಆಫೀಸ್‌ಗಳು ಹಾಗೂ ಜಿಲ್ಲಾ ಮಟ್ಟದಲ್ಲಿ 31 ಸ್ಪಂದನ ಕೇಂದ್ರಗಳಿವೆ. 2012ರಿಂದ ಈ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಈ ಕೇಂದ್ರಗಳಲ್ಲಿ ಒಟ್ಟು 1410 ಡಾಟಾ ಎಂಟ್ರಿ ಆಪರೇಟರ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ಇವರೆಲ್ಲ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೇ ಕಾರಣಕ್ಕೆ ಸೇವಾ ಭದ್ರತೆ ನೀಡಲು ಅವಕಾಶ ಇಲ್ಲ ಎಂದು ಸರ್ಕಾರ ಹೇಳಿದೆ. ಆದರೆ, ಬರುವ ದಿನಗಳಲ್ಲಿಯಾದರೂ ಇವರಿಗೆ ಸೇವಾಭದ್ರತೆ ಒದಗಿಸಬೇಕೆಂಬುದು ಅನೇಕ ಫಲಾನುಭವಿಗಳ ಅಂಬೋಣ.

ಡಾಟಾ ಏಂಟ್ರಿ ಆಪರೇಟರ್‌ ಕೆಲಸ:

ರಾಜ್ಯದ ಗ್ರಾಮೀಣ ಭಾಗದ ನಾಗರಿಕರು ತಾಲೂಕು ಮಟ್ಟದ ಕಚೇರಿಗಳಿಗೆ ಭೇಟಿ ನೀಡದೇ ತಮ್ಮ ಗ್ರಾಮದಲ್ಲಿಯೇ ಎಲ್ಲಾ ಇಲಾಖೆಗಳ ವಿವಿಧ ಸೇವೆಗಳನ್ನು ಒಂದೇ ಸೂರಿನಡಿ ನೀಡುವ ಉದ್ದೇಶದಿಂದ ಗ್ರಾಮ ಒನ್‌ ಕೇಂದ್ರ ಸ್ಥಾಪಿಸಲಾಗಿದೆ. ಇದರಿಂದ ನಾಗರಿಕರ ಸಮಯದುಳಿತಾಯದೊಂದಿಗೆ ತಮ್ಮ ದಿನಗೂಲಿ ಕಳೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಹೀಗಾಗಿ ಸ್ಥಳೀಯವಾಗಿ ಮಧ್ಯವರ್ತಿಗಳ ಹಾವಳಿ ಇಲ್ಲದೇ ಅಟಲ್‌ ಜಿ ಜನಸ್ನೇಹಿ ಕೇಂದ್ರಗಳ ಮೂಲಕ ನಾಗರಿಕರು ಸೌಲಭ್ಯ ಪಡೆಯುವಂತೆ ಮಾಡಲು ಈ ಡಾಟಾ ಎಂಟ್ರಿ ಆಪರೇಟರ್‌ಗಳು ತುಂಬ ಸಹಕಾರಿಯಾಗಿದ್ದಾರೆ.

ಕೇಂದ್ರದ ಉಪಯೋಗಗಳು:

ಮನೆಗಳ ಬಳಿಯೇ ನಾಗರಿಕರ ಸೇವೆಗಳ ಲಭ್ಯತೆ, ಎಲ್ಲ ವರ್ಧಿತ ವೈಶಿಷ್ಟ್ರ್ಯಗಳೊಂದಿಗೆ ಸೇವಾ ಸಿಂಧು ವೇದಿಕೆ ಮೂಲಕ ಸರ್ಕಾರಿ ಇಲಾಖೆಗಳಿಂದ 800ಕ್ಕೂ ಹೆಚ್ಚು ಜಿ2ಸಿ ಸೇವೆಗಳು ಲಭ್ಯ, ಗ್ರಾಮೀಣ ಜನತೆ ಪ್ರಯಾಣ ಮತ್ತು ಇತರೆ ವೆಚ್ಚದಲ್ಲಿ ಉಳಿತಾಯ, ಮಧ್ಯವರ್ತಿಗಳ ಹಾವಳಿಗೆ ತಡೆ, ಅಧಿಸೂಚಿತ ಸಮಯದಲ್ಲಿ ಸೇವೆ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಸಕಾಲ ತಂತ್ರಾಂಶದ ಏಕೀಕರಣ, ಗ್ರಾಮೀಣ ಭಾಗದಲ್ಲಿ ಉದ್ಯೋಗವಕಾಶ ಸೃಷ್ಠಿ, ಆಡಳಿತ ವ್ಯವಸ್ಥೆಗೆ ವಿಕೇಂದ್ರೀಕೃತ ಸ್ವ ಆಡಳಿತದ ಬೆನ್ನೆಲುವು ಸೃಷ್ಠಿಸುತ್ತದೆ.

ಸಾಧನೆಗಳೇನು?

ಪ್ರಸ್ತುತ ರಾಜ್ಯಾದ್ಯಂತ 7363 ಗ್ರಾಮ ಒನ್‌ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಕೇಂದ್ರಗಳ ಮೂಲಕ 80ಕ್ಕೂ ಹೆಚ್ಚು ಇಲಾಖೆಗಳ ಒಟ್ಟು 850 ಸೇವೆಗಳು ನಾಗರಿಕರಿಗೆ ಒದಗಿಸಲಾಗುತ್ತಿದೆ. ಈವರೆಗೆ ಗ್ರಾಮ ಒನ್‌ ಕೇಂದ್ರಗಳ ಮೂಲಕ 1,41,44,860 ಕೋಟಿ ಅರ್ಜಿಗಳು ಸ್ವೀಕೃತವಾಗಿದ್ದು ಅದರಲ್ಲಿ ಒಟ್ಟು 1,39,54,415 ಕೋಟಿಯಷ್ಟು ಅರ್ಜಿಗಳು ವಿಲೇವಾರಿಯಾಗಿವೆ. 1,57,445 ಅರ್ಜಿಗಳು ತಿರಸ್ಕೃತಗೊಂಡಿವೆ.

ಈ ಎಲ್ಲ ಸಾಧನೆಗಳಿಗೆ, ಜನಾನುಕೂಲಕಕ್ಕೆ ಡಾಟಾ ಎಂಟ್ರಿ ಆಪರೇಟರ್‌ಗಳ ಪಾತ್ರ ಪ್ರಮುಖವಾಗಿದ್ದು ಇನ್ನಾದರೂ ಸರ್ಕಾರ ಸೇವಾ ಭದ್ರತೆ ಒದಗಿಸಬೇಕೆಂಬ ಬೇಡಿಕೆ ಬಲವಾಗಿದೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್‌ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!