ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು! ಗಾಳಿಯಲ್ಲಿ ಗುಂಡು ಹಾರಿಸಿದ ಕಿರಾತಕರು
ಸರಕಾರ ನ್ಯೂಸ್ ಸಿಂದಗಿ
ಕೆಲ ವರ್ಷಗಳಿಂದ ತಣ್ಣಗಾಗಿದ್ದ ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದ್ದು, ಸೋಮವಾರ ಸಂಜೆ ಒಂದು ಸುತ್ತಿನ ಗುಂಡಿನ ಮೊರೆತ ಕೇಳಿ ಬಂದಿದೆ.
ಇಲ್ಲಿನ ಶಾಂತವೀರೇಶ್ವರ ಮಠದ ಬಳಿಯ ನ್ಯೂ ಚಾಮುಂಡೇಶ್ವರಿ ಜ್ಯುವೇಲರ್ಸ ಬಳಿ ಪಲ್ಸರ್ ಬೈಕ್ ಮೇಲೆ ಬಂದ ಐವರು ಕಿರಾತಕರು ಜ್ಯುವೆಲರ್ಸ್ ಮಾಲೀಕ ಕಾಳು ಮತ್ತಾರಗೆ ಹಣ ಕೇಳಿದ್ದಾರೆ. ಪರಸ್ಪರ ಮಾತು ನಡೆಯುತ್ತಿರುವಾಗಲೇ ಓರ್ವ ಪಿಸ್ತೂಲ್ ತೆಗೆದು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಕೂಡಲೇ ಸ್ಥಳೀಯ ಜನ ಜಮಾಯಿಸುತ್ತಿದ್ದಂತೆ ಮೂವರು ಪಲ್ಸರ್ ಬೈಕ್ ಮೇಲೆ ಪರಾರಿಯಾಗಿದ್ದು ಇಬ್ಬರು ಸಿಕ್ಕಿ ಬಿದ್ದಿದ್ದಾರೆ.
ವಶಕ್ಕೆ ಸಿಕ್ಕ ಇಬ್ಬರ ಬಳಿ ಒಂದು ಕಂಟ್ರಿ ಪಿಸ್ತೂಲ್ ಮೂರುಜೀವಂತ ಗುಂಡುಗಳು ಹಾಗೂ ಮಾರಕಾಸ್ಯ್ರಗಳು ಸಿಕ್ಕಿವೆ. ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆಗಂತುಕರು ಪುಣಾದವರೆಂದು ತಿಳಿದು ಬಂದಿದೆ. ಪೊಲೀಸರಿಂದ ತನಿಖೆ ಮುಂದುವರಿದೆ.
(ಕ್ಷಣಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)