ಮೊಮ್ಮಗನಿಗೆ ಬದುಕು ನೀಡಿದ ಅಜ್ಜಿ, ಇಳಿ ವಯಸ್ಸಿನಲ್ಲೂ ಕಿಡ್ನಿ ದಾನ ಮಾಡಿದ ಅಜ್ಜಿ, ಯಶೋಧಾ ಆಸ್ಪತ್ರೆಯಲ್ಲೊಂದು ಯಶೋಗಾಥೆ…!
ಸರಕಾರ ನ್ಯೂಸ್ ವಿಜಯಪುರ
ಐತಿಹಾಸಿಕ ವಿಜಯಪುರ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಮೂತ್ರ ಪಿಂಡ ಕಸಿ ಯಶಸ್ವಿಯಾಗಿ ನೆರವೇರಿಸುವ ಮೂಲಕ ಯಶೋಧಾ ಆಸ್ಪತ್ರೆ ವೈದ್ಯರು ವೈದ್ಯಕೀಯ ಇತಿಹಾಸದಲ್ಲಿ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಕಳೆದ 18 ವರ್ಷಗಳಿಂದ
ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದ 21 ವರ್ಷದ ಯುವಕನಿಗೆ 74 ವಯೋಮಾನದ ಅಜ್ಜಿ ತನ್ನ ಒಂದು ಮೂತ್ರ ಪಿಂಡ ಕಸಿ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಹಾರೂಗೇರಿಯ ಅಜ್ಜಿ ಹಾಗೂ ಮೊಮ್ಮಗ ಇದೀಗ ಯಶಸ್ಸಿ ಚಿಕಿತ್ಸೆಯಿಂದ ನೆಮ್ಮದಿಯ ನಿಟ್ಟುಸಿರುವ ಬಿಟ್ಟಿದ್ದಾರೆ.
ಏನಿದು ಪ್ರಕರಣ?
ಕಳೆದ 18 ವರ್ಷಗಳಿಂದ ಸಚಿನ ಎಂಬ ಯುವಕ ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದನು. ಮೂರು ವರ್ಷಗಳಿಂದ ಹಿಮೋ- ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದನು. ಹೀಗಾಗಿ ಈತನಿಗೆ ಮೂತ್ರ ಪಿಂಡದ ಕಸಿ ಮಾಡುವ ಅಗತ್ಯ ಕಂಡು ಬಂದಿತ್ತು. ಆದರೆ, ಮೂತ್ರಪಿಂಡ ದಾನಿಗಳು ಇರಲಿಲ್ಲ. ಇಂಥ ಸಂದರ್ಭದಲ್ಲಿ ಸಚಿನ ಅಜ್ಜಿಯೇ ತನ್ನದೊಂದು ಕಿಡ್ನಿ ದಾನ ಮಾಡಲು ಮುಂದೆ ಬಂದಾಗ ಆಸ್ಪತ್ರೆ ವೈದ್ಯ ರವೀಂದ್ರ ಮದ್ದರಕಿ ನೇತೃತ್ವದ ವೈದ್ಯರ ತಂಡ ಮೂತ್ರ ಪಿಂಡ ಕಸಿ ನಡೆಸಿತು.
ಇದೀಗ ಅಜ್ಜಿ ಹಾಗೂ ಮೊಮ್ಮಗ ಆರೋಗ್ಯವಾಗಿದ್ದಾರೆ.
ಐತಿಹಾಸಿಕ ಮೈಲಿಗಲ್ಲು:
ವಿಜಯಪುರ ಜಿಲ್ಲೆಯ ವೈದ್ಯಕೀಯ ಕ್ಷೇತ್ರದಲ್ಲಿಯೇ ಇದೊಂದು ಐತಿಹಾಸಿಕ ಮೈಲಿಗಲ್ಲು ಎನ್ನಲಾಗಿದೆ. ಯಶೋದಾ ಆಸ್ಪತ್ರೆ ಯಲ್ಲಿ ಮೂತ್ರಪಿಂಡ ಕಸಿಗೆ ಸಕಲ ವ್ಯವಸ್ಥೆ ಕಲ್ಪಿಸಲಾಗಿದ್ದು ಇನ್ಮುಂದೆ ಜಿಲ್ಲೆಯಲ್ಲಿಯೇ ಆ ಸೌಲಭ್ಯ ಸಿಗಲಿದೆ ಎನ್ನುತ್ತಾರೆ ರವೀಂದ್ರ ಮದ್ರಕಿ.
(ಕ್ಷಣ ಕ್ಷಣ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)