ನಮ್ಮ ವಿಜಯಪುರ

ಅಂತಾರಾಷ್ಟ್ರೀಯ ಕ್ರಿಕೆಟ್ ಪಟು ರಾಜೇಶ್ವರಿ ಗಾಯಕವಾಡ್ ಕಿರಿಕ್, ಸ್ಟೇಶನರಿಯಲ್ಲಿ ಗಲಾಟೆ….!

ಸರಕಾರ್ ನ್ಯೂಸ್ ವಿಜಯಪುರ

ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಪಟು ರಾಜೇಶ್ವರಿ ಗಾಯಕವಾಡ ಸ್ಟೇಶನರಿ ಅಂಗಡಿಯಲ್ಲಿ ಕಿರಿಕ್ ಮಾಡಿಕೊಂಡಿದ್ದಾರೆ.

ಸ್ಟೇಷನರಿ ಐಟಂ ಖರೀದಿಗೆ ಹೋಗಿದ್ದ ವೇಳೆ ಅಂಗಡಿಯವರೊಂದಿಗೆ ಜಗಳ ಕಾದಿದ್ದಲ್ಲದೇ ಬೆಂಬಲಿಗರಿಂದ ಹಲ್ಲೆ ಮಾಡಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ನಗರದ ಸೋಲಾಪುರ ರಸ್ತೆಯಲ್ಲಿರುವ ಉಮದಿ ಸೂಪರ್ ಮಾರ್ಕೆಟ್ ನಲ್ಲಿ ಶನಿವಾರ ಸ್ನೇಹಿತೆಯೊಂದಿಗೆ ಕಾಸ್ಮೆಟಿಕ್ ಖರೀದಿಗೆ ತೆರಳಿದ್ದ ಗಾಯಕವಾಡ ಅಲ್ಲಿನ ಸಿಬ್ಬಂದಿ ಜೊತೆ ಮನಃಸ್ತಾಪ ಮಾಡಿಕೊಂಡಿದ್ದಾರೆ. ಬಳಿಕ 8-10 ಬೆಂಬಲಿಗರನ್ನು ಕರೆಯಿಸಿ ಹಲ್ಲೆ ಮಾಡಿಸಿದ್ದಾರೆ.

ಸೂಪರ್ ಮಾರ್ಕೆಟ್ ಮಾಲೀಕ ಮಲ್ಲಿಕಾರ್ಜುನ್ ಉಮದಿ ಹಾಗೂ ಅವರ ಪುತ್ರ ಪ್ರಶಾಂತ್ ಮೇಲೆ ಹಲ್ಲೆ ನಡೆದಿದೆ. ಶನಿವಾರ ಸಂಜೆಯೇ ಈ ಘಟನೆ ನಡೆದಿದ್ದು ಇದೀಗ ಸಿಸಿ ಟಿವಿ ದೃಶ್ಯಾವಳಿಗಳು ವೈರಲ್ ಆಗಿವೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್‌ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)

error: Content is protected !!