ಬೈಕ್‌ಗೆ ಡಿಕ್ಕಿ ಹೊಡೆದ ಕಾರ್, ಕಿಲೋಮೀಟರ್‌ಗಟ್ಟಲೆ ಎಳೆದೊಯ್ದ ಬಾಡಿ, ಅಪಘಾತವೋ….ಕೊಲೆಯೋ?
ವಿಜಯಪುರ: ಬೈಕ್ ಸವಾರನಿಗೆ ಬಲವಾಗಿ ಡಿಕ್ಕಿ ಹೊಡೆದ ಕಾರ್ ಬೋನಟ್‌ನಲ್ಲಿಯೇ ಸಿಕ್ಕಿ ಬಿದ್ದ ಸವಾರನನ್ನು ಕಿಲೋ ಮೀಟರ್‌ಗಟ್ಟಲೇ ಎಳೆದೊಯ್ದು ಜೀವ ಕಿತ್ತುಕೊಂಡ ಭೀಕರ ಘಟನೆ ನಡೆದಿದೆ. ವಿಜಯಪುರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಬಳಿ ಗುರುವಾರ ಸಂಜೆ ಈ ನಡೆದ ನಡೆದಿದೆ. ಬೈಕ್‌ಸವಾರನೋರ್ವ ಭೀಕರವಾಗಿ ಸಾವಿಗೀಡಾಗಿದ್ದು, ಮೃತ ವ್ಯಕ್ತಿಯನ್ನು ಇಂಡಿ ತಾಲೂಕಿನ ಅಗರಖೇಡ ಗ್ರಾಮದ ರವಿ ಮೇಲಿನಮನಿ (24) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಈತ ವಕೀಲನೆಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಬಸವನಗರದಲ್ಲಿ ಬೈಕ್ ಮೇಲೆ ಕುಳಿತಿದ್ದಾಗ ವೇಗವಾಗಿ ಬಂದ ಇನ್ನೋವಾ ಕಾರ್ ಬಲವಾಗಿ ಡಿಕ್ಕಿ ಹೊಡೆದಿದೆ. ಕಾರ್ ಮುಂಭಾಗದ ಬೋನಟ್‌ನಲ್ಲಿ ದೇಹ ಸಿಕ್ಕಿದರೂ ಕಾರ್ ನಿಲ್ಲಿಸದೇ ಬಿಎಲ್‌ಡಿಇ ಆಯುಷ್ ಆಸ್ಪತ್ರೆವರೆಗೆ ಎಳೆದುಕೊಂಡು ಹೋಗಿರುವ ಕಾರ್ ಚಾಲಕ ಆತ ಸಾವಿಗೀಡಾಗುತ್ತಿದ್ದಂತೆ ಶವ ಬಿಟ್ಟು ಕಾರ್‌ನೊಂದಿಗೆ ಪರಾರಿಯಾಗಿದ್ದಾನೆ. ಬೈಕ್ ಸವಾರ್ ಕಾರ್ ಮುಂಭಾಗದಲ್ಲಿ ಸಿಲುಕಿದ್ದನ್ನು ಗಮನಿಸಿದ ಸಾರ್ವಜನಿಕರು ಹಾಗೂ ವಾಹನ ಸವಾರರು ಕಿರುಚಾಡಿ ಹೇಳಿದರೂ ಕಾರ್‌ನಿಲ್ಲಿಸದೇ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದು ಗಮನಿಸಿದರೆ ಇದೊಂದು ಉದ್ದೇಶಪೂರಿತ ಕೃತ್ಯ ಎಂದು ಶಂಕಿಸಲಾಗಿದೆ. ಅಲ್ಲದೇ ಕಾರ್‌ಗೆ ನಂಬರ್ ಪ್ಲೇಟ್ ಇರಲಿಲ್ಲವಂತೆ ಹಾಗೂ ಟಿಂಟೆಡ್ ಗ್ಲಾಸ್ ಇತ್ತಂತೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.