ವಿಜಯಪುರ

ಹಿರೇಮಸಳಿಯಲ್ಲಿ ವಾರ್ಷಿಕ ಸ್ನೇಹ ಸಮ್ಮಿಲನ, ವಿದ್ಯಾಜ್ಯೋತಿ ಶಾಲೆ ಮಕ್ಕಳ ಸಂಭ್ರಮ ಹೇಗಿತ್ತು ಗೊತ್ತಾ?

ಸರಕಾರ ನ್ಯೂಸ್‌ ಇಂಡಿ

ರಂಗು ರಂಗಿನ ವೇದಿಕೆ, ಬಣ್ಣದ ಬೆಳಕಿನಲ್ಲಿ ಮಕ್ಕಳ ನೃತ್ಯ, ಹಾಡು, ಛದ್ಮವೇಷ ಪ್ರದರ್ಶನ, ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ, ಮುಗಿಲು ಮುಟ್ಟಿದ ಪಾಲಕರ ಸಂಭ್ರಮೋತ್ಸಾಹ….!

ಇದು ಇಂಡಿ ತಾಲೂಕಿನ ಹಿರೇಮಸಳಿಯ ವಿದ್ಯಾಜ್ಯೋತಿ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಮತ್ತು ಕನ್ನಡ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮಿಲನದಲ್ಲಿ ಕಂಡು ಬಂದ ಸಂಭ್ರಮದ ಸನ್ನಿವೇಶ.

ಶುಕ್ರವಾರ ಸಂಜೆ ಗ್ರಾಮದ ಬಜಾರ್‌ ಓಣಿಯಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮಿಲನದಲ್ಲಿ ಮಕ್ಕಳು ಹಾಡು, ನೃತ್ಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜನಮನ ಸೂರೆಗೊಂಡರು. ಭವ್ಯ ವೇದಿಕೆಯಲ್ಲಿ ಮಕ್ಕಳು ವಿವಿಧ ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದರೆ ಪಾಲಕರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಮಕ್ಕಳ ವಾರ್ಷಿಕ ಸ್ನೇಹ ಸಮ್ಮಿಲನದಂಥ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳುವುದೇ ಒಂದು ಸೊಗಸು. ಜಾತಿ, ಮತ, ಪಂಥಗಳ ಬೇಧವಿಲ್ಲದೇ ಮಕ್ಕಳು ಸಾಮೂಹಿಕವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಖುಷಿಯ ಸಂಗತಿ ಎಂದರು.

ಶಿಕ್ಷಕ ಐ.ಎಸ್‌. ಮಾಶ್ಯಾಳ ಮಾತನಾಡಿ, ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ, ಸಂಸ್ಕೃತಿ ಕಲಿಸುವ ಕೊಡುವ ಕೆಲಸವಾಗಬೇಕು. ಮಕ್ಕಳ ಏಳಿಗೆಯಲ್ಲಿ ಶಿಕ್ಷಕರ ಪಾತ್ರದಷ್ಟೇ ಪಾಲಕರ ಪಾತ್ರವೂ ಮಹತ್ವವಾಗಿದೆ ಎಂದರು.

ಪತ್ರಕರ್ತ ಪರಶುರಾಮ ಭಾಸಗಿ ಮಾತನಾಡಿ, ಶಿಸ್ತು ಶಿಕ್ಷಣದ ಅಡಿಗಲ್ಲು, ಸಂಸ್ಕಾರವಿಲ್ಲದ ಶಿಕ್ಷಣ ವ್ಯರ್ಥ ಎಂದರು.‌

ಸಾನ್ನಿಧ್ಯ ವಹಿಸಿದ್ದ ಪೂಜ್ಯ ಶರಣಯ್ಯ ಸ್ವಾಮೀಜಿಗಳು ಮಾತನಾಡಿ, ಶಿಕ್ಷಕ ಹೇಗೋ ವಿದ್ಯಾರ್ಥಿಗಳು ಹಾಗೆ. ಶಿಕ್ಷಕರು ನಡೆ ನುಡಿಗಳಲ್ಲಿ ಒಂದಾಗಬೇಕು. ಅಂದಾಗ ಮಕ್ಕಳು ಅನುಸರಿಸುತ್ತಾರೆಂದರು.

ಮುಖಂಡರಾದ ಆರ್.ಡಿ. ಶಿವನಗುತ್ತಿ, ಮಹ್ಮದಲಿ ಗೂಗಿಹಾಳ, ಮನೋಜಗೌಡ ಪಾಟೀಲ, ಅಂಜುಮನ್‌ ಕಮೀಟಿ ಅಧ್ಯಕ್ಷ ಆರೀಫ ಅತ್ತಾರ, ಅಶೋಕ ಮರಡಿ, ತಾಪಂ ಮಾಜಿ ಅಧ್ಯಕ್ಷ ಬಗಲಿ, ಗ್ರಾಪಂ ಸದಸ್ಯ ಮೈಬೂಬ ಬಗಲಿ, ಪೀರು ಮಾಶ್ಯಾಳ, ನಿಂಗಣ್ಣ ಸಿಂದಗಿ, ಗುಬ್ಬೇವಾಡ ಮತ್ತಿತರರಿದ್ದರು. ಪ್ರಶಾಂತ ಬೀಳಗಿಮಠ ನಿರೂಪಿಸಿದರು. ಶಿಕ್ಷಕರಾದ ಪುಂಡಲೀಕ ಕಪಾಲಿ, ತಿಪ್ಪಣ್ಣ ಶಿರಕನಹಳ್ಳಿ ಮತ್ತಿತರರು ನಿರ್ವಹಿಸಿದರು.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಪಕ್ಕದಲ್ಲಿರುವ ಬೆಲ್‌  ಬಟನ್‌ ಪ್ರೆಸ್‌ ಮಾಡಿ)

error: Content is protected !!