ಪ್ರತಿಭೆಗೆ ಶಕ್ತಿ ತುಂಬಲು ಯುವಜನೋತ್ಸವ ಸಹಕಾರಿ: ಪ್ರೊ. ಬಸವರಾಜ ಬೆಣ್ಣಿ
ಕೊಪ್ಪಳ, ವಿದ್ಯಾರ್ಥಿಗಳ ಪ್ರತಿಭೆಗೆ ಶಕ್ತಿ ತುಂಬಲು ವಿಶ್ವವಿದ್ಯಾಲಯಗಳು ನಡೆಸುವ ಯುವಜನೋತ್ಸವ ಕಾರ್ಯಕ್ರಮಗಳು ಅವಶ್ಯಕವೆಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕೊಪ್ಪಳ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಪ್ರೊ.ಬಸವರಾಜ ಎಸ್. ಬೆಣ್ಣಿ ಅಭಿಪ್ರಾಯ ಪಟ್ಟರು.ಬಳ್ಳಾರಿಯಲ್ಲಿ ಇತ್ತೀಚಿಗೆ ನಡೆದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದ ಕೇಂದ್ರದ ವಿದ್ಯಾರ್ಥಿಗಳಿಗೆ ಕೊಪ್ಪಳ ಸ್ನಾತಕೋತ್ತರ ಕೇಂದ್ರದಲ್ಲಿ ಫೆ.28 ರಂದು ಆಯೋಜಿಸಿದ್ದ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು,ವಿದ್ಯಾರ್ಥಿಗಳು ಶೈಕ್ಷಣಿಕ ವಿದ್ಯಾಭ್ಯಾಸದ ಜೊತೆಜೊತೆಗೆ ಕಲೆಯನ್ನು ಮೈಗೂಡಿಸಿಕೊಳ್ಳುವುದರ ಮೂಲಕ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಕನ್ನಡ ಮತ್ತು ಇಂಗ್ಲೀಷ್ ಅಧ್ಯಯನ ವಿಭಾಗದ ನೇತೃತ್ವದಲ್ಲಿ ವಿದ್ಯಾರ್ಥಿಗಳಲ್ಲಿ ಉತ್ಸಾಹ ತುಂಬಲು ಕಂಪನ ಕಾರ್ಯಕ್ರಮ ಆರಂಭವಾಗಬೇಕು. ನಮ್ಮ ಕೇಂದ್ರದ ಪ್ರತಿಭೆ ಹೊರಹೊಮ್ಮಬೇಕು. ಆ ಮೂಲಕ ಪ್ರತಿಭೆಗೆ ಶಕ್ತಿ ತುಂಬುವAತಾಗಬೇಕು, ಈ ಹಿಂದೆ ಹಾಡುಗಾರಿಕೆಯನ್ನೇ ಚೆನ್ನಾಗಿ ಮೈಗೂಡಿಸಿಕೊಂಡು ಗುರುತಿಸಿಕೊಂಡಿರುವ ಸಿದ್ದಲಿಂಗ ಎಂಬ ವಿದ್ಯಾರ್ಥಿ ಎಲ್ಲರಿಗೂ ಸ್ಪೂರ್ತಿಯಾಗಲಿ, ಐದು ಸ್ಪರ್ಧೆಗಳಲ್ಲಿ ಭಾಗವಹಿಸಿ ಶೇ. 100 ರಷ್ಟು ಪ್ರಶಸ್ತಿ ಪಡೆದದ್ದು ಶ್ಲಾಘನೀಯವಾದದ್ದು, ಹೊಂದಾಣಿಕೆ ಹಾಗೂ ಬದ್ದತೆ ಇಲ್ಲದೆ ಸಾಧನೆ ಅಸಾಧ್ಯ. ನಮ್ಮನ್ನು ಸಾಧನೆಗೆ ತೊಡಗುವಂತೆ ಮಾಡುವ ಶಕ್ತಿ ಸಾಮಾಜಿಕ ಜಾಲತಾಣಗಳಿಗಿದೆ. ಈ ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಸಮಾಜದ ಮುಖ್ಯ ವಾಹಿನಿಯಲ್ಲಿ ಎದ್ದು ನಿಲ್ಲಬೇಕು. ಸಾಧನೆಗೆ ಆಸಕ್ತಿ ಬಹಳ ಮುಖ್ಯವಾದದ್ದು ಎಂದು ಹೇಳಿದರು.ಇಂಗ್ಲೀಷ್ ವಿಭಾಗದ ವಿ ಜಡೆಪ್ಪ ಅವರು ಮಾತನಾಡಿ, 11 ವಿದ್ಯಾರ್ಥಿಗಳು ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ. ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ತಮ್ಮ ಪ್ರತಿಭೆಯನ್ನು ತೋರ್ಪಡಿಸಬೇಕು. ಆ ಮೂಲಕ ಕೇಂದ್ರದ ಘನತೆಯನ್ನು ಹೆಚ್ಚಿಸಬೇಕೆಂದು ಕರೆಕೊಟ್ಟರು.ವಾಣಿಜ್ಯಶಾಸ್ತç ವಿಭಾಗದ ಪ್ರಾಧ್ಯಾಪಕರಾದ ಡಾ. ಪ್ರಕಾಶ ಯಳವಟ್ಟಿ ಅವರು ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಹೆಚ್ಚಿನ ಅಂಕ ಗಳಿಸಿ ಸರ್ಕಾರದ ಯಾವುದಾದರೂ ಇಲಾಖೆಯಲ್ಲಿ ನೌಕರಿ ಪಡೆಯುವುದು ಅಷ್ಟೇ ಬದುಕಲ್ಲ. ನಮ್ಮ ಪ್ರತಿಭಾ ಕೌಶಲ್ಯದ ಮೂಲಕ ಬದುಕು ಕಟ್ಟಿಕೊಳ್ಳುವುದು ಬಹು ಮುಖ್ಯವಾದದ್ದು ಎಂದರು.ಗಣಿತಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಸರಸ್ವತಿ ಅವರು ವಿಜ್ಞಾನ ದಿನಾಚರಣೆ ಬಗ್ಗೆ ಮಾತನಾಡಿದರು. ಇತಿಹಾಸ ಅದ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ಮದೂಸೂಧನ್ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಸ್ಪರ್ಧಾ ವಿಜೇತರಾದ ಹನುಮೇಶ ಹೊಸಮನಿ, ಮಲ್ಲಿಕಾರ್ಜುನ, ಹೆಚ್ ಅಮರೇಶ, ಬಾಲಪ್ಪ, ಬಸವರಾಜ, ನಿರುಪಾದಿ, ರಾಘವೇಂದ್ರ, ಕುಸುಮಾ, ಹನುಮಪ್ಪ ಇವರುಗಳಿಗೆ ಪ್ರೊ. ಬಸವರಾಜ್ ಎಸ್. ಬೆಣ್ಣಿ ಇವರು ಪ್ರಶಸ್ತಿ ಪ್ರಧಾನ ಮಾಡಿದರು. ಕನ್ನಡ ವಿಭಾಗದ ಉಪನ್ಯಾಸಕಾರದ ಡಾ. ವೀರೇಶ ಉತ್ತಂಗಿ ಅವರು ಕಾರ್ಯಕ್ರಮ ನಿರೂಪಿಸಿದರು. ಸಮಾಜ ಕಾರ್ಯ ಅಧ್ಯಯನ ವಿಭಾಗದ ಉಪನ್ಯಾಸಕರಾದ ಡಾ. ಹನುಮಂತ ಜಿ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.