ಸ್ವಯಂ ಉದ್ಯೋಗ ಪ್ರಾರಂಭಿಸಿ ಸ್ವಾವಲಂಬಿಗಳಾಗಿ ಬದುಕಿರಿ : ಕೆ.ರವೀಂದ್ರರಾವ್
ಕೊಪ್ಪಳ, ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಅವುಗಳಲ್ಲಿ ಒಂದಾದ ಪಿಎಂಇಜಿಪಿ (ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಯೋಜನೆ) ಯಂತಹ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಜಿಲ್ಲೆಯ ಜನರು ಸ್ವಯಂ ಉದ್ಯೋಗ ಪ್ರಾರಂಭಿಸಿ, ಸ್ವಾಲಂಬಿಗಳಾಗಿ ಬದುಕಬೇಕು ಎಂದು ಕೊಪ್ಪಳ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ನಾಮ ನಿರ್ದೇಶಿತ ಸದಸ್ಯರಾದ ಕೆ.ರವೀಂದ್ರರಾವ್ ಅವರು ಹೇಳಿದರು. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ವಲಯ ಕಛೇರಿ, ಕೈಗಾರಿಕಾ ಕೇಂದ್ರ, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಫೆ.25 ರಂದು ಕುಕನೂರಿನ ಶಂಕರಮಠ ಆವರಣದಲ್ಲಿ ಆಯೋಜಿಸಿದ್ದ ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಯೋಜನೆಯ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸ್ವ ಉದ್ಯೋಗ ಆರಂಭಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವಾರು ಯೋಜನೆಗಳ ಮೂಲಕ ನಿರುದ್ಯೋಗಿಗಳಿಗೆ ಹಾಗೂ ಉದ್ಯಮ ಆರಂಭಿಸುವವರಿಗೆ ಅನುಕೂಲ ಮಾಡಿಕೊಟ್ಟಿದೆ. ಅವುಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವುದರ ಮೂಲಕ ಸ್ವಾವಲಂಬಿಗಳಾಗಿ ಬದುಕಬೇಕು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಅರಿವು-ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಿ ಗ್ರಾಮೀಣರಲ್ಲೂ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಪ್ಪಳ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ಕೈಗಾರಿಕಾ ನಿರ್ದೇಶಕರಾದ ಪ್ರಶಾಂತ ಬಾರಿಗಿಡದ್ ಮಾತನಾಡಿ, ಪ್ರತಿಯೊಬ್ಬರೂ ಈ ಯೋಜನೆಯ ಲಾಭ ಪಡೆಯುವ ಮೂಲಕ ಸ್ವಾಲಂಬಿಗಳಾಗಬೇಕು. ಎಲ್ಲರಿಗೂ ಸರ್ಕಾರ ನೌಕರಿ ಕೊಡಲು ಸಾಧ್ಯವಿಲ್ಲ. ಸಣ್ಣ-ಅತಿ ಸಣ್ಣ ಉದ್ದಿಮೆಗಳನ್ನು ಸ್ಥಾಪಿಸಲು ತರಬೇತಿ ಕೇಂದ್ರಗಳು ಇದ್ದು, ಅವುಗಳಲ್ಲಿ ತರಬೇತಿ ಪಡೆದು ಉದ್ದಿಮೆಯನ್ನು ಸ್ಥಾಪಿಸಬೇಕು. ಈ ನಿಟ್ಟಿನಲ್ಲಿ ಬ್ಯಾಂಕ್‌ಗಳ ಪಾತ್ರ ಮಹತ್ವ್ವದ್ದಾಗಿರುತ್ತದೆ. ಉತ್ತಮ ಘಟಕಗಳಿಗೆ ಬ್ಯಾಂಕ್‌ಗಳು ಪ್ರೋತ್ಸಾಹ ನೀಡುತ್ತವೆ ಎಂದು ಅವರು ಹೇಳಿದರು.ಎಸ್‌ಬಿಐ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ರೇವಣಸಿದ್ದಪ್ಪ ಭೋಳ ಮಾತನಾಡಿ, ನೀಡ್‌ಬೇಸ್ಡ್ ಘಟಕಗಳಿಗೆ ಬ್ಯಾಂಕ್‌ಗಳು ಸಾಲ ನೀಡುತ್ತಿದ್ದು, ಸಾಲಕ್ಕೆ ಯಾವುದೇ ಆಸ್ತಿಗಳನ್ನು ಒತ್ತೆ ಇಡುವ ಅವಶ್ಯಕತೆ ಇಲ್ಲ, ಆದರೆ ಅಉಖಿಒSಒಇ ಗೆ ಶುಲ್ಕ ಭರಿಸಬೇಕಾಗುತ್ತದೆ. ಘಟಕ ಸ್ಥಾಪನೆಗೆ ಸಂಬAಧಿಸಿದ ಮಾಹಿತಿಗಾಗಿ ಹತ್ತಿರದ ಬ್ಯಾಂಕ್‌ಗಳಿಗೆ ಭೇಟಿ ನೀಡಿ, ಅಗತ್ಯ ದಾಖಲೆಗಳನ್ನು ಒದಗಿಸಿ ನಿಮ್ಮದೇ ಉದ್ಯಮವನ್ನು ಆರಂಭಿಸಬಹುದು ಎಂದು ಅವರು ಹೇಳಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಯಲಬುರ್ಗಾ ಶಾಖೆಯ ಪ್ರತಿನಿಧಿ ಶೇಖರಗೌಡ ಪಾಟೀಲ್ ಮಾತನಾಡಿ, ತಮ್ಮ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮೂಲಕ ಅನುಷ್ಠಾನಗೊಳಿಸುತ್ತಿರುವ ಉದ್ದಿಮೆ ಸ್ಥಾಪಿಸುವವರಿಗೆ ಇರುವ ಕಿರುಸಾಲ ಯೋಜನೆಗಳ ಬಗ್ಗೆ ಮತ್ತು ಹೊಸ ಯೋಜನೆಗಳ ಬಗ್ಗೆ ತಿಳಿಸಿದರು. ಪಿಎಂಇಜಿಪಿ ಉದ್ದಿಮೆಗಳು ಮತ್ತು ತಮ್ಮ ಸಂಸ್ಥೆಯ ಗ್ರಾಮೀಣಾಭಿವೃದ್ಧಿ ಉದ್ದಿಮೆಗಳು ಒಂದೇ ಮಾದರಿಗಳಾಗಿದ್ದು, ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಕೆ. ವಿರೇಶ್ ಪ್ರಾಸ್ತ್ತಾವಿಕವಾಗಿ ಮಾತನಾಡಿ, ಈ ಯೋಜನೆಯಲ್ಲಿ ಸಿಗಬಹುದಾದ ಸಾಲ ಸೌಲಭ್ಯಗಳ ಅನುದಾನ ವಿವರ, ಸ್ಥಾಪಿಸಬಹುದಾದ ಸೇವಾ ಉದ್ದಿಮೆಗಳು, ಉತ್ಪಾದನಾ ಉದ್ದಿಮೆಗಳು ಹಾಗೂ ಯೋಜನೆಯನ್ನು ಕೆವಿಐಬಿ/ಕೆವಿಐಸಿ/ಡಿಐಸಿ ಇಲಾಖೆಗಳು ಅನುಷ್ಠಾನಗೊಳಿಸುತ್ತಿರುವ ಬಗ್ಗೆ ಹಾಗೂ ಬ್ಯಾಂಕ್‌ಗಳ ಮೂಲಕ ಸಾಲ ನೀಡಿಕೆ ಕುರಿತು ಮಾಹಿತಿ ನೀಡಿದರು. ಲಕ್ಷಬದುಕಿರಿ ರವರು ಯೋಜನೆಯ ಯಶಸ್ವಿ ಉದ್ದಿಮೆದಾರ ನಾಡಗೌಡರ ಮಾತನಾಡಿ, ಯೋಜನೆಯ ಸಂಪೂರ್ಣ ಉಪಯೋಗಪಡೆದುಕೊಂಡು ಸಿಮೆಂಟ್ ಉದ್ದಿಮೆಯನ್ನು ಸ್ಥಾಪಿಸುವ ಮೂಲಕ ಸ್ವಾಲಂಬಿಯಾಗಿ ತಮ್ಮ ಬದುಕು ಹಸನವಾಗಿರುವ ಬಗ್ಗೆ ತಿಳಿಸಿದರು ಅಲ್ಲದೇ ಬ್ಯಾಂಕ್‌ಗಳು ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಕೊಪ್ಪಳ ಆರ್‌ಸೆಟಿ ಕೇಂದ್ರದ ಲಕ್ಷ್ಮೀಕಾಂತ, ಸಿಡಾಕ್ ಸಂಸ್ಥೆಯ ಅಕ್ಷತಾ, ಸಮೂಹ ಸಂಸ್ಥೆಯ ಮಂಜುನಾಥ ಸೇರಿದಂತೆ ಇತರರು ಉಪಸ್ಥಿತರಿದ್ದರು.