ನಮ್ಮ ವಿಜಯಪುರ

ಅರವತ್ತು ಅಡಿ ಆಳಕ್ಕೆ ಬಿದ್ದು ವ್ಯಕ್ತಿ ಸಾವು, ಅಗ್ನಿ ಶಾಮಕ ಠಾಣೆ ಸಿಬ್ಬಂದಿ ಕಾರ್ಯಾಚರಣೆ, ಏನಾಗಿತ್ತು?

ಸರಕಾರ್‌ ನ್ಯೂಸ್‌ ಸಿಂದಗಿ

ಅರವತ್ತು ಅಡಿ ಆಳದ ಬಾವಿಗೆ ಬಿದ್ದು ವ್ಯಕ್ತಿಯೋರ್ವ ಅಸುನೀಗಿರುವ ಘಟನೆ ಸಿಂದಗಿ ತಾಲೂಕಿನ ಬಂಥನಾಳ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.

ಸ್ಥಳೀಯ ನಿವಾಸಿ ಶ್ರೀಶೈಲ ಧೂಳಪ್ಪ ಹಲಸಂಗಿ (28) ಎಂಬುವವರು ಸಾವಿಗೀಡಾಗಿದ್ದಾರೆ. ಭಾನುವಾರ ಸಂಜೆ ತಮ್ಮ ಜಮೀನಿನಲ್ಲಿರುವ ಬಾವಿಗೆ ಶ್ರೀಶೈಲ ಬಿದ್ದಿದ್ದಾರೆ. ಅಂದಾಜು 60 ಅಡಿ ಆಳದ ಬಾವಿ ಇದ್ದು, 30 ಮೊಳ ನೀರು ಇತ್ತು.

ಮಡದಿ ಹತ್ತಿ ಬಿಡಿಸುತ್ತಿದ್ದು ನೀರು ತರುತ್ತೇನೆಂದು ಬಾವಿಗೆ ಹೋಗಿ ಬಿದ್ದಿದ್ದಾರೆ. ಈಜು ಬಾರದ ಶ್ರೀಶೈಲ ಅಸುನೀಗಿದ್ದು, ಇದೊಂದು ಆತ್ಮಹತ್ಯೆ ಎಂದು ಶಂಕಿಸಲಾಗಿದೆ. ಏಕೆಂದರೆ ಶ್ರೀಶೈಲ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದನೆಂದು ತಿಳಿದು ಬಂದಿದೆ.

ಇವರಿಗೆ ಒಬ್ಬನೇ ಮಗನಿದ್ದು, ಹತ್ತಿ  ಬಿಡಿಸುವಾಗ ಈತ ಸಹ ಜೊತೆಯಲ್ಲಿಯೇ ಇದ್ದನು. ಸೋಮವಾರ ಸಿಂದಗಿ ಅಗ್ನಿಶಾಮಕ ಠಾಣೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಶವ ಹೊರತೆಗೆದಿದ್ದಾರೆ. ಗ್ರಾಮಸ್ಥರು ಕುತೂಹಲದಿಂದ ಕಾರ್ಯಾಚಣೆ ವೀಕ್ಷಿಸಲು ಮುಗಿಬಿದ್ದಿದ್ದರು.

ಸಿಂದಗಿ ಅಗ್ನಿಶಾಮಕ ಠಾಣೆಯ ಎಎಫ್‌ಎಸ್ ಟಿಒ ಶರಣಪ್ಪ, ಎಲ್‌ಎಫ್‌ ಮಚ್ಚೇಂದ್ರ, ಎಫ್‌ಡಿ ರವಿ ನಾಯ್ಕ, ಎಫ್‌ಎಂ ಸಿದ್ದಣ್ಣ ರೋಡಗಿ, ಮಲಕಣ್ಣ ತೆಗ್ಗೆಳ್ಳಿ, ಹಣಮಂತ ಕುಂಬಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್‌ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ಮಾಡಿ)

error: Content is protected !!