ಹಿಂದೂಗಳ ಬಗ್ಗೆ ರಾಹುಲ್ ಗಾಂಧಿ ಹೇಳಿಕೆಗೆ ಖಂಡನೆ, ವಿಜಯಪುರದಿಂದಲೂ ದಾಖಲಾಯಿತು ದೂರು !
ವಿಜಯಪುರ: ಭಾರತ ಸರ್ಕಾರದ ನೂತನ ಕಾನೂನುಗಳನ್ವಯ ರಾಹುಲ್ ಗಾಂಧಿ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಅಧಿವೇಶನದಲ್ಲಿ ಹಿಂದುಗಳ ಕುರಿತು ಮಾತನಾಡಿದ ರಾಹುಲ್ ಗಾಂಧಿ ಹೇಳಿಕೆ ಖಂಡಿಸಿ ಸ್ವಾಮಿ ವಿವೇಕಾನಂದ ಸೇನೆ ಅಧ್ಯಕ್ಷ ರಾಘವ ಅಣ್ಣಿಗೇರಿ ದೂರು ದಾಖಲಿಸಿದ್ದಾರೆ. ಸೋಮವಾರ ನಡೆದ ಅಧಿವೇಶನದಲ್ಲಿ ರಾಹುಲ್ ಗಾಂಧಿ ಹಿಂದುಗಳ ಕುರಿತು ಮಾತನಾಡುತ್ತಾ ‘ಹಿಂದೂ ಎಂದು ಕರೆದುಕೊಳ್ಳುವವರು ಹಿಂಸೆ, ದ್ವೇಷ ಹರಡುತ್ತಿದ್ದಾರೆ. ಅಸತ್ಯದ ಬಗ್ಗೆ ಮಾತ್ರ ಮಾತನಾಡುತ್ತಾರೆ’ ಎಂದು ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲಿನ ತಮ್ಮ ಭಾಷಣದ ವೇಳೆ ಹೇಳಿದರು. ಈ ವಿಷಯ ಅತ್ಯಂತ ಗಂಭೀರವಾಗಿದ್ದು ಹಿಂದುಗಳ ಧಾರ್ಮಿಕ ಭಾವನೆಗೆ ಹಾಗೂ ಹಿಂದೂ ಎಂದು ಕರೆದುಕೊಳ್ಳುವ ಸರ್ವರಿಗೂ ತುಂಬಾ ಘಾಸಿಯುಂಟು ಮಾಡಿದೆ, ಇವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಸ್ವಾಮಿ ವಿವೇಕಾನಂದ ಸೇನೆ ವಿನಂತಿ ಮಾಡಲಿದೆ ಎಂದು ತಿಳಿಸಿದ್ದಾರೆ.
ದೂರು ದಾಖಲಿಸಿದ್ದಕ್ಕೆ ಸ್ವೀಕೃತಿ ಕೂಡ ದೊರೆತಿದೆ. ನೂತನ ಕಾನೂನು ಅನ್ವಯ ಜಿಲ್ಲೆಯಲ್ಲಿ ದಾಖಲಾದ ಮೊದಲ ಪ್ರಕರಣ ಇದು ಎನ್ನಲಾಗಿದೆ.