ರಾಷ್ಟ್ರೀಯ

ಭಾರತೀಯ ಕರೆನ್ಸಿ ಮೇಲೆ ಲಕ್ಷ್ಮಿ- ಗಣೇಶ ಫೋಟೋ ಹಾಕಿ, ಪ್ರಧಾನಿಗೆ ಪತ್ರ ಬರೆದ ಅರವಿಂದ ಕೇಜ್ರಿವಾಲ

ಸರಕಾರ್ ‌ನ್ಯೂಸ್ ಡೆಸ್ಕ್ ನವದೆಹಲಿ

ಭಾರತೀಯ ಕರೆನ್ಸಿ ಮೇಲೆ ಮಹಾತ್ಮ ಗಾಂಧಿ ಜೊತೆಗೆ ಗಣೇಶ ಮತ್ತು ಲಕ್ಷ್ಮಿ ಅವರ ಚಿತ್ರ ಹಾಕಬೇಕೆಂದು ಕೋರಿ ದೆಹಲಿ ಮುಖ್ಯ ಮಂತ್ರಿ ಅರವಿಂದ ಕೇಜ್ರಿವಾಲಾ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

“ಭಾರತೀಯ ಕರೆನ್ಸಿಯ ಒಂದು ಬದಿಯಲ್ಲಿ ಗಾಂಧೀಜಿ ಮತ್ತು ಇನ್ನೊಂದು ಬದಿಯಲ್ಲಿ ಗಣೇಶ ಮತ್ತು ಲಕ್ಷ್ಮಿ ಅವರ ಚಿತ್ರ ಇರಬೇಕೆಂದು ದೇಶದ 130 ಕೋಟಿ ಜನರು ಬಯಸುತ್ತಾರೆ ” ಎಂದು ಕೇಜ್ರಿವಾಕಾ ಪತ್ರದಲ್ಲಿ ತಿಳಿಸಿದ್ದಾರೆ.

ಅಲ್ಲದೇ ದೇಶದ ಅರ್ಥಿಕತೆಯು ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ದೆ ಎಂದು ಹೇಳಿರುವುದು ಪತ್ರದ ಉದ್ದೇಶವೇನು? ಎಂಬ ಪ್ರಶ್ನೆ ಮೂಡಿಸಿದೆ.
ಸ್ವಾತಂತ್ರ್ಯ ಬಂದು 75 ವರ್ಷಗೋ ನಂತರವೂ ಭಾರತವು ಅಭಿವೃದ್ಧಿ ಹೊಂದುತ್ತಿರುವ ಮತ್ತು ಬಡರಾಷ್ಟ್ರಗಳ ಪಟ್ಟಿಯಲ್ಲಿದೆ. ಇಂದಿಗೂ ದೇಶದಲ್ಲಿ ತುಂಬಾ ಬಡವರಿದ್ದಾರೆ. ಏಕೆ? ಎಂದು ಪ್ರಶ್ನಿಸಿ ದ್ದಾರೆ.

ಮುಂದುವರಿದು “ಒಂದೆಡೆ ನಾಗರಿಕರೆಲ್ಲರೂ ಕಷ್ಟಪಟ್ಟು ದುಡಿಯ ಬೇಕು ಮತ್ತು ಇನ್ನೊಂದೆಡೆ ದೇವರ ಆಶೀರ್ವಾದವೂ ಬೇಕು. ಹಾಗಾದರೆ ಮಾತ್ರ ನಮ್ಮ ಪ್ರಯತ್ನಗಳು ಫಲಪ್ರದವಾಗುತ್ತವೆಮ ಸರಿಯಾದ ನೀತಿ, ಕಠಿಣ ಪರಿಶ್ರಮ ಮತ್ತು ದೇವರ ಆಶೀರ್ವಾದಗಳ ಸಂಗಮದಿಂದ ಮಾತ್ರ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಸಾಧ್ಯ” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೆ ನಾನು ಸಾರ್ವಜನಿಕವಾಗಿಯೂ ಇದೇ ವಿಚಾರವನ್ನು ಒತ್ತಾಯಿಸಿದ್ದೇನೆ ಎಂದು ಉಲ್ಲೇಖಿಸಲಾಗಿದೆ. ಮಾತ್ರವಲ್ಲ ಈ ವಿಚಾರಕ್ಕೆ ಸಾರ್ವಜನಿಕರಿಂದ ಅಪಾರ ಬೆಂಬಲ ವ್ಯಕ್ತವಾಗಿದೆ ಎಂದಿದ್ದಾರೆ.
ಸದ್ಯ ಈ ಪತ್ರವನ್ನು ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ಸಾಕಷ್ಟು ಚರ್ಚೆ ಶುರುವಾಗಿದೆ.

error: Content is protected !!