ಅಂಗನವಾಡಿಗಳಲ್ಲಿ ಮೊಟ್ಟೆಗೆ ಹೆಚ್ಚಿದ ಬೇಡಿಕೆ, ಅಚ್ಚರಿ ಮೂಡಿಸುತ್ತಿದೆ ಮೊಟ್ಟೆಗಳ ಅಂಕಿ ಅಂಶ… ಇದು ಕೋಟಿ ಮೊಟ್ಟೆಯ ಕಥೆ….!
ವಿಜಯಪುರ: ಮೊಟ್ಟೆ ಸಸ್ಯಹಾರಿಯೋ? ಮಾಂಸಹಾರಿಯೋ? ಎಂಬ ಚರ್ಚೆ ಮುಂದುವರಿಸುತ್ತಲೇ ಕೋಟಿ ಕೋಟಿ ಮೊಟ್ಟೆ ಮಕ್ಕಳ ಹೊಟ್ಟೆ ಸೇರುತ್ತಿದೆ…..!
ಸರ್ಕಾರಿ ಶಾಲೆಗಳ ಮಕ್ಕಳಿಗೆ ಮೊಟ್ಟೆ ಹಂಚಿಕೆ ಮಾಡುವ ಸರ್ಕಾರದ ನಿರ್ಧಾರಕ್ಕೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಆದರೆ, ಉತ್ತರ ಕರ್ನಾಟದ ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ಹಂಚಿಕೆಯಿಂದಲೇ ಮಕ್ಕಳ ಹಾಜರಾತಿ ಹೆಚ್ಚಾಯಿತೆಂದು ಸಮೀಕ್ಷೆಯೊಂದು ವರದಿ ನೀಡಿತು.
ಇನ್ನೊಂದೆಡೆ ವಿದ್ಯಾರ್ಥಿನಿಯೋರ್ವಳು ಮೊಟ್ಟೆ ಕೊಡುವುದಕ್ಕೆ ವಿರೋಧ ವ್ಯಕ್ತಪಡಿಸಿದರೆ ಮಠದಲ್ಲಿಯೇ ಕುಳಿತು ಮೊಟ್ಟೆ ತಿನ್ನಬೇಕಾಗುತ್ತದೆ ಎಂದು ಮಠಾಧೀಶರ ವಿರುದ್ಧ ಗುಡುಗು ಹಾಕಿದ್ದು ಈಗ ಹಳೇ ಮಾತು. ಏತನ್ಮಧ್ಯೆ ಅಂಗನವಾಡಿಗಳಲ್ಲಿ ಹಂಚಿಕೆಯಾಗುತ್ತಿರುವ ಮೊಟ್ಟೆಗಳ ಸಂಖ್ಯೆ ಹುಬ್ಬೇರಿಸುವಂತೆ ಮಾಡುತ್ತದೆ. ರಾಜ್ಯಾದ್ಯಂತ ಅಂಗನವಾಡಿಗಳಲ್ಲಿ ಹಂಚಿಕೆಯಾಗುತ್ತಿರುವ ಮೊಟ್ಟೆಗಳ ವಿವರ ಇಲ್ಲಿದೆ ನೋಡಿ.
ರಾಜ್ಯದ ಪ್ರತಿ ಅಂಗನವಾಡಿ ಕೇಂದ್ರಗಳಲ್ಲಿ 3 ವರ್ಷದಿಂದ 6 ವರ್ಷದೊಳಗಿನ ಎಲ್ಲ ಮಕ್ಕಳಿಗೆ ವಾರದಲ್ಲಿ 2 ದಿನ ಕೋಳಿ ಮೊಟ್ಟೆ ಕೊಡಲಾಗುತ್ತದೆ. 3 ವರ್ಷದಿಂದ 6 ವರ್ಷದ ತೀವ್ರ ಅಪೌಷ್ಠಿಕ ಮಕ್ಕಳಿಗೆ ಮತ್ತು ಹಿಂದುಳಿದ ಜಿಲ್ಲೆಗಳಾದ ಬೀದರ್, ಕಲಬುರಗಿ, ರಾಯಚೂರ, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಯ ಸಾಧಾರಣ ಅಪೌಷ್ಠಿಕ ಮಕ್ಕಳಿಗೆ ವಾರದಲ್ಲಿ 5 ದಿನ ಮೊಟ್ಟೆ ಕೊಡಲಾಗುತ್ತದೆ.
6 ತಿಂಗಳಿಂದ ೩ ವರ್ಷದ ತೀವ್ರ ಅಪೌಷ್ಠಿಕ ಮಕ್ಕಳಿಗೆ ಮೇಲಿನ ಐದು ಜಿಲ್ಲೆಗಳಲ್ಲಿ ವಾರದಲ್ಲಿ 3 ದಿನ ಮೊಟ್ಟೆ ನೀಡಲಾಗುತ್ತದೆ. ಮಾತೃಪೂರ್ಣ ಯೋಜನೆಯಡಿ ಗರ್ಭಿಣಿ, ಬಾಣಂತಿಯರು, ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ವಾರದಲ್ಲಿ 6 ದಿನ ಮೊಟ್ಟೆ ನೀಡಲಾಗುತ್ತಿದೆ.
ರಾಜ್ಯದ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಜನವರಿ -2022ರ ಮಾಹೆಯಲ್ಲಿ 4,55,79,983 ಮೊಟ್ಟೆಗಳನ್ನುಖರೀದಿಸಿ ವಿತರಿಸಲಾಗುತ್ತಿದೆ. ಇದರಲ್ಲಿ ವಿಜಯಪುರ ಹಾಗೂ ಕಲಬುರಗಿಯ ಪಾಲು ದಟ್ಟವಾಗಿರುವುದು ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.
ಜಿಲ್ಲಾವಾರು ಮೊಟ್ಟೆಯ ವಿವರ
ಜಿಲ್ಲೆ ತಿಂಗಳಿಗೆ ಬೇಕಾಗುವ ಮೊಟ್ಟೆ
ಬಾಗಲಕೋಟೆ 19994993
ಬೆಂಗಳೂರು (ಗ್ರಾ) 663855
ರಾಮನಗರ 657746
ಬೆಂಗಳೂರು (ನ) 2037542
ಬೆಳಗಾಂವ 4538785
ಬಳ್ಳಾರಿ 2788209
ಬೀದರ್ 1682674
ವಿಜಯಪುರ 2462296
ಚಾಮರಾಜನಗರ 616664
ಚಿಕ್ಕಮಗಳೂರು 684720
ಚಿತ್ರದುರ್ಗ 1327204
ಮಂಗಳೂರು 1593625
ದಾವಣಗೆರೆ 1226286
ಧಾರವಾಡ 1414002
ಗದಗ 1018475
ಕಲಬುರಗಿ 2700634
ಯಾದಗಿರಿ 1951380
ಹಾಸನ 1020809
ಹಾವೇರಿ 1484688
ಕೋಲಾರ 1088528
ಚಿಕ್ಕಬಳ್ಳಾಪುರ 1006837
ಕೊಡಗು 342301
ಕೊಪ್ಪಳ 1888857
ಮಂಡ್ಯ 1037545
ಮೈಸೂರು 1669701
ರಾಯಚೂರು 2213524
ಶಿವಮೊಗ್ಗ 1140294
ತುಮಕೂರು 1647827
ಉಡುಪಿ 653831
ಉತ್ತರ ಕನ್ನಟ 1026151
ಒಟ್ಟು 45579983